ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಗಳಲ್ಲಿ ಕರಾಟೆ ಬೆಲ್ಟ್ ಪರೀಕ್ಷೆ

February 24, 2026
karate belt examination patte sri krishna educational institutions

ಪಟ್ಟೆ ಬಡಗನ್ನೂರು: ದಿನಾಂಕ 23-02-2026ನೇ ಸೋಮವಾರದಂದು ದ್ವಾರಕಾ ಪ್ರತಿಷ್ಠಾನ(ರಿ.) ಪುತ್ತೂರು ಇದರ ವತಿಯಿಂದ ನಡೆಸಲ್ಪಡುವ ಶ್ರೀಕೃಷ್ಣ ವಿದ್ಯಾಸಂಸ್ಥೆಗಳಲ್ಲಿ ಕರಾಟೆ ಯಲ್ಲೋ ಬೆಲ್ಟ್ ಪರೀಕ್ಷೆ ನಡೆಸಲಾಯಿತು. ಕರ್ನಾಟಕ ಚೀಫ್ ಇನ್ಸ್ಪೆಕ್ಟರ್ IASKA 6th Dan Black Belt ಶಿಹಾನ್ ಟಿ.ಡಿ ಥೋಮಸ್ ಇವರು ಮುಖ್ಯ ತೀರ್ಪುಗಾರರಾಗಿ ಪರೀಕ್ಷೆಯನ್ನು ನಡೆಸಿದರು. ಈ ಪರೀಕ್ಷೆಯಲ್ಲಿ ಸಂಸ್ಥೆಯ ಒಟ್ಟು 28 ವಿದ್ಯಾರ್ಥಿಗಳು ಹಾಜರಾಗಿ ಉತ್ತೀರ್ಣಗೊಂಡಿದ್ದಾರೆ. ಇವರೊಂದಿಗೆ ಸಂಸ್ಥೆಯ ಮುಖ್ಯ ಕರಾಟೆ ತರಬೇತುದಾರರಾದ ಶ್ರೀ ಶೇಖರ್ ಮಾಡಾವು ಇವರು ಸಹ ತೀರ್ಪುಗಾರರಾಗಿ ಸಹಕರಿಸಿದರು. ಸಮರ ಅಭ್ಯಾಸ ಕಲೆಗಳಲ್ಲಿ ಒಂದಾಗಿರುವ ಕರಾಟೆಯನ್ನು ಶ್ರೀಕೃಷ್ಣ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಕಲಿಸಲಾಗಿದ್ದು ಇದು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿದೆ ಮತ್ತು ಸುಸಂಸ್ಕೃತ ಸಮಾಜವನ್ನು ನಿರ್ಮಿಸುವಲ್ಲಿ ಸಂಸ್ಥೆಯು ಕಟ್ಟಿಬದ್ದವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಶ್ರೀಮಾನ್ ಗೋಪಾಲಕೃಷ್ಣ ಭಟ್ ತಿಳಿಸಿದರು. ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ಶ್ರೀಯುತ ವಿಘ್ನೇಶ್ ಹಿರಣ್ಯರವರು ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಪ್ರೌಢ ಶಾಲಾ ಮುಖ್ಯ ಗುರುಗಳಾದ ಶ್ರೀಮತಿ ಸುಮನ ಮಾತಾಜಿ, ಪ್ರಾಥಮಿಕ ಶಾಲಾ ಮುಖ್ಯಗುರುಗಳಾದ ಶ್ರೀಮಾನ್ ರಾಜಗೋಪಾಲ್ ಉಪಸ್ಥಿತರಿದ್ದರು. ಶಿಕ್ಷಕಿಯರಾದ ಶ್ರೀಮತಿ ಭವಿತಾ ಮಾತಾಜಿ ಮತ್ತು ಶ್ರೀಮತಿ ಚಿತ್ರ ಮಾತಾಜಿಯವರು ಸಹಕರಿಸಿದರು.

Dwaraka Ad

Related Blog

farewell community meeting patte
ಪಟ್ಟೆ ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳಲ್ಲಿ ಬೀಳ್ಕೊಡುವ ಸಮಾರಂಭ ಹಾಗೂ ಸಮುದಾಯದತ್ತ ಸಭೆ
ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಗಳಲ್ಲಿ ಶ್ರೀ ರಾಮನವಮಿ ಆಚರಣೆ ಮತ್ತು ಆಕಾಶಕ್ಕೆ ಏಣಿ ಬೇಸಿಗೆ ಶಿಬಿರ
ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಯ ವಿದ್ಯಾರ್ಥಿಯ Inspire Award ಮಾದರಿ ಜಿಲ್ಲಾ ಮಟ್ಟಕ್ಕೆ ಆಯ್ಕೆ