ಶ್ರೀಕೃಷ್ಣ ವಿದ್ಯಾಸಂಸ್ಥೆಗಳಲ್ಲಿ 12ನೇ ಅಂತರಾಷ್ಟ್ರೀಯ ಯೋಗ ದಿನ ಆಚರಣೆ

June 22, 2026
12th International Yoga Day Celebration at Shrikrishna Educational Institutions

ಪಟ್ಟೆ ಬಡಗನ್ನೂರು :ಸದಾ ಚಟುವಟಿಕೆ ಲವಲವಿಕೆ ಆರೋಗ್ಯದಿಂದಿರಲು ಯೋಗ ಉತ್ತಮ ಮಾರ್ಗವಾಗಿದೆ ಇದು ನಮ್ಮ ದೇಶದ ಸಂಸ್ಕೃತಿಯನ್ನು ಬಿಂಬಿಸುವ ವಿದ್ಯೆ. ಇಡೀ ವಿಶ್ವಕ್ಕೆ ಯೋಗವನ್ನು ಪರಿಚಯಿಸಿಕೊಟ್ಟದ್ದು ನಮ್ಮ ಭಾರತ. ದೇಹ ಮನಸ್ಸನ್ನು ಸಮತೋಲಿಸಿಕೊಂಡು ಮಹರ್ಷಿ ಪತಂಜಲಿ ಅವರಿಂದ ಪ್ರಣಿತವಾದ ಯೋಗವನ್ನು ನಾವೆಲ್ಲ ಅಳವಡಿಸಿಕೊಳ್ಳಬೇಕು. ನಾವಿಂದು ಆಚರಿಸುವ ಯೋಗ ದಿನಾಚರಣೆಯು ನಿರಂತರ ಅಭ್ಯಾಸವಾಗಿ ನಮ್ಮ ಜೀವನ ಸದಾ ಆರೋಗ್ಯದಿಂದ ಕೂಡಿರುವಂತಾಗಲಿ ಎಂದು ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಶ್ರೀಮಾನ್ ಗೋಪಾಲಕೃಷ್ಣ ಭಟ್ ಹೇಳಿದರು. ಇವರು ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳಲ್ಲಿ ಆಚರಿಸಲಾದ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಯುತ ಗೋಪಿನಾಥ ಶ್ರೀಮಾನ್ ಇವರ ಮಾರ್ಗದರ್ಶನದಲ್ಲಿ ಯೋಗ ಗುರುಗಳಾದ ಶ್ರೀಮಾನ್ ಅಶೋಕ ಅಂಬಟ ಇವರ ನೇತೃತ್ವದಲ್ಲಿ ಸಂಸ್ಥೆಯ ಎಲ್ಲ ವಿದ್ಯಾರ್ಥಿಗಳು ಕ್ರೀಡಾಂಗಣದಲ್ಲಿ ಯೋಗಾಭ್ಯಾಸವನ್ನು ಮಾಡಿದರು. ಯೋಗದ ಮಹತ್ವವನ್ನು 10ನೇ ತರಗತಿ ವಿದ್ಯಾರ್ಥಿನಿ ಜೀವಿತ ಹೆಚ್ ಇವರು ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಯೋಗ ಗುರುಗಳಾದ ಶ್ರೀಮಾನ್ ಅಶೋಕ ಅಂಬಟ ಹಾಗೂ ಸಂಸ್ಥೆಯ ಸಂಚಾಲಕರಾದ ಶ್ರೀಮಾನ್ ವಿಘ್ನೇಶ್ ಹಿರಣ್ಯ ಪ್ರೌಢಶಾಲಾ ವಿಭಾಗದ ಮುಖ್ಯ ಗುರುಗಳಾದ ಸುಮನಾ. ಬಿ .ಮಾತಾಜಿ ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಗುರುಗಳಾದ ಶ್ರೀಮಾನ್ ರಾಜಗೋಪಾಲ್ ಎನ್.ಆಂಗ್ಲ ಮಾಧ್ಯಮ ಶಾಲಾ ವಿಭಾಗದ ಮುಖ್ಯ ಗುರುಗಳಾದ ಪುಷ್ಪಾವತಿ. ಬಿ. ಮಾತಾಜಿ ಹಾಗೂ ಸಂಸ್ಥೆಯ ಮೂರು ವಿಭಾಗಗಳ ಎಸ್. ಡಿ .ಎಂ. ಸಿ ಅಧ್ಯಕ್ಷರುಗಳಾದ ಕೇಶವ ಪ್ರಸಾದ್ ನೀಲಗಿರಿ, ಸತೀಶ್ ಕೊಪ್ಪಳ ಮತ್ತು ಲಿಂಗಪ್ಪಗೌಡ ಮೋಡಿಕೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿಶೇಷವಾಗಿ ಮಕ್ಕಳೊಂದಿಗೆ ಪೋಷಕರು ಯೋಗಾಭ್ಯಾಸದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಸಹಕರಿಸಿದರು. ಪ್ರಾಥಮಿಕ ಶಾಲಾ ವಿಭಾಗದ ಸ್ವರ್ಣ ಶ್ರೀ ಮಾತಾಜಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರನ್ನು ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಅಹನಾ ಹಾಗೂ ಧೃತಿ. ರೈ ಪ್ರಾರ್ಥಿಸಿದರು.ಆಶಾ ಮಾತಾಜಿ ಅವರು ಧನ್ಯವಾದವಿತ್ತರು. ಆಂಗ್ಲ ಮಾಧ್ಯಮ ವಿಭಾಗದ ಸುದೀಪ್ತಿ ಮಾತಾಜಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಎಲ್ಲಾ ಗುರು ವೃಂದದವರು ಪಾಲ್ಗೊಂಡಿದ್ದರು.

Dwaraka Constructions Ad

Related Blog

ಪುತ್ತೂರು ವಲಯದ ಮಟ್ಟದ ಕ್ರೀಡಾಕೂಟದಲ್ಲಿ ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಗೆ ಬಹುಮಾನಗಳು
kanakabhiyana ramadhanya charite gamaka
ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳು ಪಟ್ಟೆ, ಬಡಗನ್ನೂರು ಕನಕಾಭಿಯಾನ -ರಾಮಧಾನ್ಯ ಚರಿತೆ -ಗಮಕ
Shrikrishna educational trust
ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳು ಪಟ್ಟೆ -ವಿನಾಯಕ ಚೌತಿ ಹಬ್ಬದ ಪ್ರಯುಕ್ತ ಯಕ್ಷಗಾನ ತಾಳಮದ್ದಳೆ