ಉಜ್ಜೀವನ ಬಡಾವಣೆಯಲ್ಲಿ ಸಾಮೂಹಿಕ ಭೂಮಿ ಪೂಜೆ

June 19, 2026
collective bhoomi pooja at ujjivana layout

ದ್ವಾರಕಾ ಕಾರ್ಪ್. ಪ್ರೈ. ಲಿ. ಇದರ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಉಪ್ಪಿನಂಗಡಿ ಸಮೀಪದ ಕೆಮ್ಮಾರದ ಉಜ್ಜೀವನ ಬಡಾವಣೆಯಲ್ಲಿ ಸಾಮೂಹಿಕ ಭೂಮಿ ಪೂಜೆ ದಿನಾಂಕ 18-06-2026ರಂದು ಜರುಗಿತು. ಪುರೋಹಿತರಾದ ಶ್ರೀ ವೇ. ಮೂ. ಕೃಷ್ಣಕುಮಾರ ಉಪಾಧ್ಯಾಯ ಇವರ ನೇತೃತ್ವದಲ್ಲಿ ಸಾಮೂಹಿಕ ಭೂಮಿ ಪೂಜೆ ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ಸುಮಾರು 51 ಮನೆಯ ಭೂಮಿ ಪೂಜೆ ನಡೆದಿದ್ದು, ಹಲವು ಗ್ರಾಹಕರು ತಮ್ಮ ಸೈಟ್ ನ ಭೂಮಿ ಪೂಜೆಯನ್ನು ನೆರವೇರಿಸಿದರು. ಇದೇ ಸಂದರ್ಭದಲ್ಲಿ ಬಡಾವಣೆಯ ದ್ವಾರಕಾ ನೆಸ್ಟ್ ನ ಲೋಕಾರ್ಪಣೆ ಪ್ರಯುಕ್ತ ಧಾರ್ಮಿಕ ಕಾರ್ಯಗಳು ನಡೆಯಿತು. ದಿನಾಂಕ 17-06-2026ರ ರಾತ್ರಿ ವಾಸ್ತು ಪೂಜೆ, ವಾಸ್ತು ಹೋಮ; ಹಾಗೆಯೇ 18-06-2026ರಂದು ಮಹಾಗಣಪತಿ ಹವನ, ಲಕ್ಷ್ಮೀ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ದ್ವಾರಕಾ ಸಮೂಹ ಸಂಸ್ಥೆಗಳ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಗೋಪಾಲಕೃಷ್ಣ ಭಟ್ಟ ಅರ್ತ್ಯಡ್ಕ, ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಅಮೃತಕೃಷ್ಣ ಎನ್., ಡೈರೆಕ್ಟರ್ ಶ್ರೀಮತಿ ಅಶ್ವಿನಿ ಎನ್. ಸೇರಿದಂತೆ ಸಿಬ್ಬಂದಿ ವರ್ಗ, ಬಂಧು ಮಿತ್ರರು, ಗ್ರಾಹಕರು, ಮಾಧ್ಯಮ ಮಿತ್ರರು ಉಪಸ್ಥಿತರಿದ್ದರು.

Dwaraka Constructions Ad

Related Blog

ಪುತ್ತೂರು ವಲಯದ ಮಟ್ಟದ ಕ್ರೀಡಾಕೂಟದಲ್ಲಿ ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಗೆ ಬಹುಮಾನಗಳು
kanakabhiyana ramadhanya charite gamaka
ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳು ಪಟ್ಟೆ, ಬಡಗನ್ನೂರು ಕನಕಾಭಿಯಾನ -ರಾಮಧಾನ್ಯ ಚರಿತೆ -ಗಮಕ
Shrikrishna educational trust
ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳು ಪಟ್ಟೆ -ವಿನಾಯಕ ಚೌತಿ ಹಬ್ಬದ ಪ್ರಯುಕ್ತ ಯಕ್ಷಗಾನ ತಾಳಮದ್ದಳೆ