ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳು ಪಟ್ಟೆ ಪ್ರೌಢಶಾಲಾ ವಿಭಾಗದ ಶಾಲಾ ಮಂತ್ರಿ ಮಂಡಲ ರಚನೆ

June 11, 2026

ಪಟ್ಟೆ ಬಡಗನ್ನೂರು: ಪ್ರತಿಭಾ ಪ್ರೌಢಶಾಲೆ ಪಟ್ಟೆ ಇದರ 2026-27 ಶೈಕ್ಷಣಿಕ ವರ್ಷದ ಶಾಲಾ ಮಂತ್ರಿ ಮಂಡಲವನ್ನು ರಚಿಸಲಾಯಿತು. ಶಾಲಾ ಮುಖ್ಯಮಂತ್ರಿ ಯಾಗಿ 10ನೇ ತರಗತಿಯ ನಿಶಾಂತ್, ಉಪಮುಖ್ಯಮಂತ್ರಿಯಾಗಿ 9ನೇ ತರಗತಿಯ ಸೂರಜ್ ಪಿ.ಎಸ್ ಆಯ್ಕೆಯಾಗಿರುತ್ತಾರೆ. ಶಾಲಾ ವಿರೋಧ ಪಕ್ಷದ ನಾಯಕನಾಗಿ 9ನೇ ತರಗತಿಯ ವರುಣ್ ಕುಮಾರ್, ಗೃಹ ಮಂತ್ರಿಯಾಗಿ 9ನೇ ತರಗತಿಯ ಚರಣ್, 8ನೇ ತರಗತಿಯ ಭುವನ್ , ಸಾಂಸ್ಕೃತಿಕ ಮಂತ್ರಿಯಾಗಿ 9ನೇ ತರಗತಿಯ ಅಹನ, 8ನೇ ತರಗತಿಯ ಶ್ರೀಕಲಾ, ಆರೋಗ್ಯಮಂತ್ರಿಯಾಗಿ 9ನೇ ತರಗತಿ ದೃತಿ ರೈ, 9ನೇ ತರಗತಿ ಪ್ರತೀಕ್, ಕ್ರೀಡಾಮಂತ್ರಿಯಾಗಿ 9ನೇ ತರಗತಿಯ ಪ್ರತ್ವಿಶ್, 8ನೇ ತರಗತಿ ಆದಿ, ಅಕ್ಷರ ದಾಸೋಹ ಮಂತ್ರಿಯಾಗಿ 9ನೇ ತರಗತಿಯ ಲಾವಿಕ ರೈ, 8ನೇ ತರಗತಿಯ ಶನ್ಮಿತ, ಕೃಷಿ ಮಂತ್ರಿಯಾಗಿ 9ನೇ ತರಗತಿ ದೀವಿತ್ ಎಸ್.ಪಿ ಮತ್ತು ನಿಕ್ಷಿತ್ 9ನೇ ತರಗತಿ ಆಯ್ಕೆಯಾಗಿರುತ್ತಾರೆ. ಮತ ಪೆಟ್ಟಿಗೆಯ ಜೊತೆಗೆ ಆಧುನಿಕ ತಂತ್ರಜ್ಞಾನದ ಡಿಜಿಟಲ್ ಇವಿಎಂ ಬಳಸಿ ವಿದ್ಯಾರ್ಥಿಗಳು ಡಿಜಿಟಲ್ ಮತದಾನ ಮಾಡಿದ್ದು ಚುನಾವಣೆಯ ವಿಶೇಷವಾಗಿತ್ತು. ಪ್ರೌಢಶಾಲಾ ಮುಖ್ಯ ಗುರುಗಳಾದ ಶ್ರೀಮತಿ ಸುಮನ ಮಾತಾಜಿ ಅವರ ನೇತೃತ್ವದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರೌಢಶಾಲಾ ಎಲ್ಲಾ ಶಿಕ್ಷಕರು ಸಹಕರಿಸಿದರು.

Dwaraka Constructions Ad

Related Blog

ಪುತ್ತೂರು ವಲಯದ ಮಟ್ಟದ ಕ್ರೀಡಾಕೂಟದಲ್ಲಿ ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಗೆ ಬಹುಮಾನಗಳು
kanakabhiyana ramadhanya charite gamaka
ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳು ಪಟ್ಟೆ, ಬಡಗನ್ನೂರು ಕನಕಾಭಿಯಾನ -ರಾಮಧಾನ್ಯ ಚರಿತೆ -ಗಮಕ
Shrikrishna educational trust
ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳು ಪಟ್ಟೆ -ವಿನಾಯಕ ಚೌತಿ ಹಬ್ಬದ ಪ್ರಯುಕ್ತ ಯಕ್ಷಗಾನ ತಾಳಮದ್ದಳೆ