ಪಟ್ಟೆ ಬಡನ್ನೂರು : ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳು ಪಟ್ಟೆ, ಬಡಗನ್ನೂರು ಹಾಗೂ ಕನಕದಾಸ ಅಧ್ಯಯನ ಪೀಠ, ಮಂಗಳೂರು ವಿಶ್ವ ವಿದ್ಯಾನಿಲಯ ಮಂಗಳ ಗಂಗೋತ್ರಿ ಸಂಯುಕ್ತವಾಗಿ ಪಟ್ಟೆ ವಿದ್ಯಾ ಸಂಸ್ಥೆಯ ಸಭಾಭವನದಲ್ಲಿ ರಾಮಧಾನ್ಯ ಚರಿತೆ ಗಮಕ ನಡೆಯಿತು.
ಈ ಕಾರ್ಯಕ್ರಮವನ್ನು ಪಟ್ಟೆ ವಿದ್ಯಾ ಸಂಸ್ಥೆಗಳ ನಿರ್ದೇಶಕರಾದ ಶ್ರೀಮತಿ ಅಶ್ವಿನಿ ಮಾತಾಜಿಯವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.
“ಹಿರಿಯರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ನಮ್ಮ ಜೀವನವು ಪಾವನವಾಗುತ್ತದೆ. ಭಕ್ತಿಯಿಂದ ದೇವರನ್ನು ಬೇಡಿದಾಗ ನಮ್ಮ ಅಹಂಕಾರವನ್ನು ಕರಗಿಸಿಕೊಳ್ಳಬಹುದು. ಒಟ್ಟಾಗಿ ಸಮಾನತೆಯಿಂದ ಬಾಳಬೇಕೆಂದು ಕನಕದಾಸರ ಆಶಯ” ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ಕನಕದಾಸ ಅಧ್ಯಯನ ಪೀಠದ ಸಂಯೋಜಕರು ಆಗಿರುವ ಡಾ. ಧನಂಜಯ ಕುಂಬ್ಳೆಯವರು ಆಶಯದ ನುಡಿಗಳನ್ನು ಆಡಿದರು. ಈ ಕಾರ್ಯಕ್ರಮದಲ್ಲಿ ಗಮಕ ವ್ಯಾಖ್ಯಾನವನ್ನು ಪಟ್ಟೆ ವಿದ್ಯಾ ಸಂಸ್ಥೆಗಳ ನಿರ್ದೇಶಕರು, ನಿವೃತ್ತ ಪ್ರಾಚಾರ್ಯರು, ಕಲಾವಿದರು ಆದ ಶ್ರೀ ಗಣರಾಜ ಕುಂಬ್ಳೆ, ಗಮಕ ವಾಚಕರಾಗಿ ಮೂಡಬಿದ್ರೆ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಶ್ರೀರಾಮ ಪ್ರಸಾದ್ ಕಾಂಚೋಡು ಭಾಗವಹಿಸಿದ್ದರು. ಪಟ್ಟೆ ವಿದ್ಯಾಸಂಸ್ಥೆಗಳ ನಿರ್ದೇಶಕರಾದ ಶ್ರೀ ಜಿ,ಪರಮೇಶ್ವರ್ ಭಟ್, ಸಂಸ್ಥೆಗಳ ಸಂಚಾಲಕರಾದ ಶ್ರೀ ವಿಘ್ನೇಶ್ ಹಿರಣ್ಯ, ಪ್ರೌಢ ಶಾಲಾಮುಖ್ಯಗುರುಗಳಾದ ಶ್ರೀಮತಿ ಸುಮನಾ ಮಾತಾಜಿ, ಪ್ರಾಥಮಿಕ ಶಾಲಾ ಮುಖ್ಯಗುರುಗಳಾದ ಶ್ರೀ ರಾಜಗೋಪಾಲ್ ಎನ್, ಉಪಸ್ಥಿತರಿದ್ದರು.



ಶ್ರೀಯುತ ರಾಜಗೋಪಾಲ್ ಎನ್, ಸ್ವಾಗತಿಸಿ, ಪ್ರೌಢಶಾಲಾ ಶಿಕ್ಷಕರಾದ ಶ್ರೀ ವಿಶ್ವನಾಥ ಬೊಳ್ಳಾಡಿ ಧನ್ಯವಾದವನ್ನಿತ್ತರು. ಶ್ರೀಮತಿ ಜ್ಯೋತಿ ಕುಮಾರಿ ಕಾರ್ಯಕ್ರಮ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಕನಕದಾಸ ಅಧ್ಯಯನ ಪೀಠ, ಮಂಗಳೂರು ವಿಶ್ವವಿದ್ಯಾನಿಲಯದ ಸಿಬ್ಬಂದಿಗಳಾದ ಶ್ರೀಯುತ ಕಿರಣ್,ಸರಿತಾ ವಿದ್ಯಾರ್ಥಿಗಳಾದ ಕುಮಾರಿ ಸ್ನೇಹ ಮತ್ತು ನೇತ್ರಾವತಿ, ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.