ಪುತ್ತೂರು ವಲಯದ ಮಟ್ಟದ ಕ್ರೀಡಾಕೂಟದಲ್ಲಿ ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಗೆ ಬಹುಮಾನಗಳು

September 22, 2026

ನೆಟ್ಟಣಿಗೆ ಮುಡ್ನೂರುನಲ್ಲಿ ನಡೆದ ಪುತ್ತೂರು ವಲಯ ಮಟ್ಟದ ಕ್ರೀಡಾಕೂಟದಲ್ಲಿ ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಹಲವು ಬಹುಮಾನವನ್ನು ಪಡೆದುಕೊಂಡಿರುತ್ತಾರೆ.
8ನೇ ತರಗತಿಯ ಶ್ರೀಕಲಾ- ಗುಂಡು ಎಸೆತ ಸ್ಪರ್ಧೆಯಲ್ಲಿ ಪ್ರಥಮ ಮತ್ತು ಚಕ್ರ ಎಸೆತ ಸ್ಪರ್ಧೆಯಲ್ಲಿ ತೃತೀಯ ಸ್ಥಾನ, 10ನೇ ತರಗತಿಯ ಜೀವಿತಾ -200 ಮೀಟರ್ ಓಟ ದ್ವಿತೀಯ, 100 ಮೀಟರ್ ಓಟ ತೃತೀಯ, 8ನೇ ತರಗತಿಯ ಅದ್ವಿತ್ ಶೆಟ್ಟಿ ಎತ್ತರ ಜಿಗಿತ ಪ್ರಥಮ, 8ನೇ ತರಗತಿಯ ಹರ್ಷಿಕಾ ಎತ್ತರ ಜಿಗಿತದಲ್ಲಿ ತೃತೀಯ, 10ನೇ ತರಗತಿಯ ದೀಪಕ್ ಗುಂಡು ಎಸೆತ ದ್ವಿತೀಯ, ರಿಲೇಯಲ್ಲಿ 9ನೇಯ ತರಗತಿಯ ಸುಹಾನ, ಕಾವ್ಯ,ಸುಪ್ರದಾಲಕ್ಷ್ಮಿ, 10ನೇತರಗತಿಯ ಜೀವಿತಾ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.

ವಿದ್ಯಾರ್ಥಿಗಳಿಗೆ ವಿದ್ಯಾ ಸಂಸ್ಥೆಗಳ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಯುತ ಮೋನಪ್ಪ ಎಂ, ಶ್ರೀಯುತ ಗೋಪಿನಾಥ್ ತರಬೇತಿಯನ್ನು ನೀಡಿರುತ್ತಾರೆ. ವಿಜೇತರಾದ ವಿದ್ಯಾರ್ಥಿಗಳಿಗೆ ಹಾಗೂ ತರಬೇತಿದಾರರಿಗೆ ಪಟ್ಟೆ ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸರ್ವ ಸದಸ್ಯರು ಅಭಿನಂದನೆಗಳು ಸಲ್ಲಿಸಿರುತ್ತಾರೆ.

Dwaraka Constructions Ad

Related Blog

ಪುತ್ತೂರು ವಲಯದ ಮಟ್ಟದ ಕ್ರೀಡಾಕೂಟದಲ್ಲಿ ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಗೆ ಬಹುಮಾನಗಳು
kanakabhiyana ramadhanya charite gamaka
ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳು ಪಟ್ಟೆ, ಬಡಗನ್ನೂರು ಕನಕಾಭಿಯಾನ -ರಾಮಧಾನ್ಯ ಚರಿತೆ -ಗಮಕ
Shrikrishna educational trust
ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳು ಪಟ್ಟೆ -ವಿನಾಯಕ ಚೌತಿ ಹಬ್ಬದ ಪ್ರಯುಕ್ತ ಯಕ್ಷಗಾನ ತಾಳಮದ್ದಳೆ