ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಗಳಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ ವಿಜ್ಞಾನ ವಸ್ತು ಪ್ರದರ್ಶನ

March 2, 2026
Science Exhibition National Science Day

ಪಟ್ಟೆ ಬಡಗನ್ನೂರು : ದಿನಾಂಕ 28/02/2026 ಶನಿವಾರದಂದು ದ್ವಾರಕಾ ಪ್ರತಿಷ್ಠಾನ (ರಿ.)ಪುತ್ತೂರು ಇದರ ವತಿಯಿಂದ ನಡೆಸಲ್ಪಡುವ ಶ್ರೀಕೃಷ್ಣ ವಿದ್ಯಾ ಸಂಸ್ಥೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ ವಿಜ್ಞಾನ ವಸ್ತು ಪ್ರದರ್ಶನ ಜರುಗಿತು. ಈ ಕಾರ್ಯಕ್ರಮವನ್ನು ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಗಳ ಸಂಚಾಲಕರಾದ ಶ್ರೀಯುತ ವಿಘ್ನೇಶ್ ಹಿರಣ್ಯರವರು ಉದ್ಘಾಟಿಸಿ, ಈ ವಿಜ್ಞಾನ ವಸ್ತು ಪ್ರದರ್ಶನವು ವೈಜ್ಞಾನಿಕ ದೃಷ್ಟಿಕೋನವನ್ನು ಬೆಳೆಸಲು ಸಹಕಾರಿಯಾಗಿದೆ ಎಂದರು. ಸಂಸ್ಥೆಯ ವಿವಿಧ ತರಗತಿಗಳ ಸುಮಾರು 20ಕ್ಕೂ ಹೆಚ್ಚು ತಂಡಗಳ ವಿದ್ಯಾರ್ಥಿಗಳು ವಿಜ್ಞಾನ ಮಾದರಿ ಪ್ರಾತ್ಯಕ್ಷತೆಗಳನ್ನು ಪ್ರದರ್ಶಿಸಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಪ್ರಾಥಮಿಕ ಶಾಲಾ ಮುಖ್ಯ ಗುರುಗಳಾದ ಶ್ರೀಮಾನ್ ರಾಜಗೋಪಾಲ ಎನ್, ಪ್ರೌಢಶಾಲಾ ಮುಖ್ಯ ಗುರುಗಳಾದ ಶ್ರೀಮತಿ ಸುಮನಾ ಬಿ ಮಾತಾಜಿಯವರು ಉಪಸ್ಥಿತರಿದ್ದರು. 9ನೇ ತರಗತಿಯ ವಿದ್ಯಾರ್ಥಿನಿಯಾದ ಕುಮಾರಿ ಜೀವಿತ ಎಚ್ ವಿಜ್ಞಾನ ದಿನಾಚರಣೆ ಮಹತ್ವವನ್ನು ತಿಳಿಸಿದರು. 9ನೇ ತರಗತಿಯ ವಿಸ್ಮಿತಾ ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರೌಢಶಾಲಾ ವಿಜ್ಞಾನ ಶಿಕ್ಷಕಿಯಾದ ಶ್ರೀಮತಿ ಭವಿತಾ ಮಾತಾಜಿರವರು ಮಾರ್ಗದರ್ಶನ ನೀಡಿದರು. ಸಂಸ್ಥೆಯ ಎಲ್ಲಾ ಶಿಕ್ಷಕ ವರ್ಗದವರು ಉಪಸ್ಥಿತರಿದ್ದರು.

Dwaraka Constructions Ad

Related Blog

ಪುತ್ತೂರು ವಲಯದ ಮಟ್ಟದ ಕ್ರೀಡಾಕೂಟದಲ್ಲಿ ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಗೆ ಬಹುಮಾನಗಳು
kanakabhiyana ramadhanya charite gamaka
ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳು ಪಟ್ಟೆ, ಬಡಗನ್ನೂರು ಕನಕಾಭಿಯಾನ -ರಾಮಧಾನ್ಯ ಚರಿತೆ -ಗಮಕ
Shrikrishna educational trust
ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳು ಪಟ್ಟೆ -ವಿನಾಯಕ ಚೌತಿ ಹಬ್ಬದ ಪ್ರಯುಕ್ತ ಯಕ್ಷಗಾನ ತಾಳಮದ್ದಳೆ