ಸಹಾಯರೂಪದಲ್ಲಿ ಹೊಲಿಗೆ ಯಂತ್ರ ಹಸ್ತಾಂತರ

May 19, 2026
Sewing Machine Distribution

ದ್ವಾರಕಾ ಪ್ರತಿಷ್ಠಾನ (ರಿ.), ಪುತ್ತೂರು ಇದರ ವತಿಯಿಂದ ‘ದ್ವಾರಕಾ – ಆರ್ತ ಸಹಾಯ ಯೋಜನೆ’ಯಡಿಯಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಪುತ್ತೂರು ತಾಲೂಕು, ಪಂಚಾಯತ್ ಕಾರ್ಯಾಲಯ ಇವರ ಮುಖೇನ ಬಂದ ಮನವಿಯನ್ನು ಪರಿಗಣಿಸಿ, ಸ್ವಾವಲಂಬಿ ಜೀವನಕ್ಕಾಗಿ ಸಹಾಯ ರೂಪದಲ್ಲಿ ಹೊಲಿಗೆ ಯಂತ್ರವನ್ನು ಮರೀಲ್ ನ ಶ್ರೀ ನಾಗರಾಜ ಇವರಿಗೆ ದಿನಾಂಕ 18-05-2026ರಂದು ಹಸ್ತಾಂತರಿಸಲಾಯಿತು.

ಫಲಾನುಭವಿಯು ತೀವ್ರತರವಾದ ದೈಹಿಕ ವಿಕಲಚೇತನರಾಗಿದ್ದು, ಆರ್ಥಿಕವಾಗಿ ಬಹಳ ಹಿಂದುಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೀಯುತರಿಗೆ ಸ್ವ ಉದ್ಯೋಗವನ್ನು ಮಾಡಲು ದ್ವಾರಕಾ ಪ್ರತಿಷ್ಠಾನವು ಹೊಲಿಗೆ ಯಂತ್ರವನ್ನು ಉಚಿತವಾಗಿ ನೀಡಿದೆ.

ಈ ಸಂದರ್ಭದಲ್ಲಿ ಫಲಾನುಭವಿಗಳನ್ನು ಸೇರಿದಂತೆ ಸಂಸ್ಥೆಯ ಇನ್ವೆಂಟರಿ ಮ್ಯಾನೇಜರ್ ಶ್ರೀ ಮೋಹನ ಮೂರ್ತಿ, ಕಾರ್ಯಾಚರಣೆ ವಿಭಾಗದ ಮುಖ್ಯಸ್ಥರಾದ ಶ್ರೀ ದುರ್ಗಾಗಣೇಶ ಕೆ. ವಿ. ಉಪಸ್ಥಿತರಿದ್ದರು. ಸಂಸ್ಥೆಯಿಂದ ನೀಡಿದ ಯಂತ್ರವು ಸದ್ವಿನಿಯೋಗಗೊಂಡು ಫಲಾನುಭವಿಗಳ ಮುಂದಿನ ಜೀವನವು ಸುಖಮಯವಾಗಿರಲಿ ಎಂದು ಸಂಸ್ಥೆ ಹಾರೈಸಿದೆ.

Dwaraka Constructions Ad

Related Blog

ಪುತ್ತೂರು ವಲಯದ ಮಟ್ಟದ ಕ್ರೀಡಾಕೂಟದಲ್ಲಿ ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಗೆ ಬಹುಮಾನಗಳು
kanakabhiyana ramadhanya charite gamaka
ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳು ಪಟ್ಟೆ, ಬಡಗನ್ನೂರು ಕನಕಾಭಿಯಾನ -ರಾಮಧಾನ್ಯ ಚರಿತೆ -ಗಮಕ
Shrikrishna educational trust
ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳು ಪಟ್ಟೆ -ವಿನಾಯಕ ಚೌತಿ ಹಬ್ಬದ ಪ್ರಯುಕ್ತ ಯಕ್ಷಗಾನ ತಾಳಮದ್ದಳೆ