ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳು ಪಟ್ಟೆ 2025- 26 ನೇ ಸಾಲಿನ 10ನೇ ತರಗತಿ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ

May 9, 2026
shri krishna vidya samsthe patte 10th standard

ಪಟ್ಟೆ ಬಡಗನ್ನೂರು: “ನಾನು ಪಾಸು ಆಗುವುದರಿಂದ ನೂರು ಶೇಕಡಾ ಫಲಿತಾಂಶ ಬರಲು ಸಾಧ್ಯವಿಲ್ಲ ನಾವು ಪಾಸು ಆಗೋದರ ಮೂಲಕ ನೂರು ಶೇಕಡಾ ಫಲಿತಾಂಶ ಬರಲು ಸಾಧ್ಯ ಒಗ್ಗಟ್ಟಿನಿಂದ ದೃಢಸಂಕಲ್ಪದಿಂದ ಚಿಂತನೆ ಮಾಡಿದಾಗ ಶೇಕಡಾ 100 ಫಲಿತಾಂಶ ಬರಲು ಸಾಧ್ಯವಾಗುತ್ತದೆ. ಉತ್ತಮ ದಾರಿಯನ್ನು ಆಯ್ಕೆ ಮಾಡಿ ಉಜ್ಜಲ ಭವಿಷ್ಯ ನಿಮ್ಮದಾಗಲಿ” ಎಂದು ಪಟ್ಟೆ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಶ್ರೀಮಾನ್ ಗೋಪಾಲಕೃಷ್ಣಭಟ್ ಅವರು 2025 -26 ನೇ ಸಾಲಿನಲ್ಲಿ ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳಲ್ಲಿ ನೂರು ಶೇಕಡಾ ಫಲಿತಾಂಶ ತಂದುಕೊಟ್ಟ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಸಂಸ್ಥೆಯ ನಿರ್ದೇಶಕರಾದ ಗಣರಾಜ ಕುಂಬ್ಳೆ ಅವರು “ಒಳ್ಳೆಯ ಸಾಧನೆ ಮತ್ತು ಒಳ್ಳೆಯ ಚಿಂತನೆಯನ್ನು ಮಾಡಿ ಸಮಾಜಕ್ಕೆ ಉಪಯುಕ್ತ ವ್ಯಕ್ತಿಗಳಾಗಿ ಬಾಳಬೇಕೆಂದು” ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಪ್ರತಿಭಾ ಪ್ರೌಢ ಶಾಲೆಯ SDMC ಅಧ್ಯಕ್ಷರಾದ ಶ್ರೀಮಾನ್ ಲಿಂಗಪ್ಪ ಗೌಡ ಮೋಡಿಕೆ, ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳ ಸಂಚಾಲಕರಾದ ಶ್ರೀಮಾನ್ ವಿಘ್ನೇಶ್ ಹಿರಣ್ಯ, ಪ್ರತಿಭಾ ಪ್ರೌಢಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಸುಮನ. ಬಿ.ಮಾತಾಜಿ, ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಶ್ರೀಮಾನ್ ರಾಜಗೋಪಾಲ್.ಏನ್. ಉಪಸ್ಥಿತರಿದ್ದರು. 10ನೇ ತರಗತಿಯ ಧನ್ಯತ್ ಗೌಡ ಕೆ. ಪಿ ಮತ್ತು ಸಿಂಚನ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಶ್ರೀಮತಿ ಸುಮನ ಮಾತಾಜಿ ಸ್ವಾಗತಿಸಿ, ಶ್ರೀಮತಿ ಭವಿತಾ ಮಾತಾಜಿಯವರು ಧನ್ಯವಾದವನ್ನಿತ್ತರು. ಶ್ರೀಮತಿ ಪ್ರೀತಿ ಕುಮಾರಿ ಎಂ. ಪಿ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಅಧ್ಯಕ್ಷರಾದ ಶ್ರೀಮಾನ್ ಗೋಪಾಲಕೃಷ್ಣ ಭಟ್ ಎಲ್ಲಾ ವಿದ್ಯಾರ್ಥಿಗಳಿಗೂ ಹಾಗೂ ಶಿಕ್ಷಕರಿಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ವಿದ್ಯಾರ್ಥಿಗಳ ಪೋಷಕರು ಹಾಗೂ ಸಂಸ್ಥೆಯ ಎಲ್ಲಾ ಶಿಕ್ಷಕ ವರ್ಗದವರು ಉಪಸ್ಥಿತರಿದ್ದರು.

Dwaraka Constructions Ad

Related Blog

ಪುತ್ತೂರು ವಲಯದ ಮಟ್ಟದ ಕ್ರೀಡಾಕೂಟದಲ್ಲಿ ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಗೆ ಬಹುಮಾನಗಳು
kanakabhiyana ramadhanya charite gamaka
ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳು ಪಟ್ಟೆ, ಬಡಗನ್ನೂರು ಕನಕಾಭಿಯಾನ -ರಾಮಧಾನ್ಯ ಚರಿತೆ -ಗಮಕ
Shrikrishna educational trust
ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳು ಪಟ್ಟೆ -ವಿನಾಯಕ ಚೌತಿ ಹಬ್ಬದ ಪ್ರಯುಕ್ತ ಯಕ್ಷಗಾನ ತಾಳಮದ್ದಳೆ