ಉಜ್ಜೀವನ ಲೋಕಾರ್ಪಣ

June 22, 2026
Ujjivana Inauguration

‘ಪ್ರೀತಿ, ಗೌರವ ಹಾಗೂ ಭದ್ರತೆಗಾಗಿ ಉಜ್ಜೀವನ’ ಎಂಬ ಧ್ಯೇಯದೊಂದಿಗೆ ದ್ವಾರಕಾ ಕಾರ್ಪ್.ಪ್ರೈ. ಲಿ. ವತಿಯಿಂದ ಉಪ್ಪಿನಂಗಡಿ ಸಮೀಪದ ಕೆಮ್ಮಾರದಲ್ಲಿ ನಿರ್ಮಾಣಗೊಳ್ಳುತ್ತಿರುವ; ಹಿರಿಯರಿಗೆ ಅಗತ್ಯವಿರುವ ಸಕಲ ಸೌಲಭ್ಯಗಳನ್ನು ಒಳಗೊಂಡ ‘ಉಜ್ಜೀವನ’ ಹಿರಿಯ ನಾಗರಿಕರ ಬಡಾವಣೆಯ ಲೋಕಾರ್ಪಣಾ ಸಮಾರಂಭವು ದಿನಾಂಕ 21-6-2026ರಂದು ಉಜ್ಜೀವನ ಬಡಾವಣೆಯಲ್ಲಿ ನೆರವೇರಿತು.

ಶ್ರೀಮತಿ ಸುಮನಾ ಪ್ರಸಾದ್ ಮತ್ತು ಶ್ರೀಮತಿ ರಕ್ಷಾ ಗಣೇಶ್ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ನೆರೆದ ಸರ್ವರನ್ನು ಹಾಗೂ ಗಣ್ಯರನ್ನು ದ್ವಾರಕಾ ಕಾರ್ಪ್. ಪ್ರೈ. ಲಿ. ಇದರ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಅಮೃತಕೃಷ್ಣ ಎನ್. ಅವರು ಸ್ವಾಗತಿಸಿದರು.

‘ಉಜ್ಜೀವನ’ ಹಿರಿಯ ನಾಗರಿಕರ ಬಡಾವಣೆಯನ್ನು ಮಾಜಿ ಶಾಸಕರಾದ ಶ್ರೀ ಸಂಜೀವ ಮಠಂದೂರು ಅವರು ಲೋಕಾರ್ಪಣೆ ಮಾಡಿದರು.ನಂತರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು “ಭಾರತದಲ್ಲಿ ಕೂಡು ಕುಟುಂಬದ ಸಂಸ್ಕೃತಿ ಇದೆ. ಕುಟುಂಬಗಳ ಒಳಗೆ ಒಗ್ಗಟ್ಟು ವೃದ್ಧಿಯಾಗಿ ಅವಿಭಕ್ತ ಕುಟುಂಬಗಳು ಉಳಿಯಬೇಕಿದೆ. ದ್ವಾರಕಾ ಸಂಸ್ಥೆ ನಿರ್ಮಿಸಿದ ಬಡಾವಣೆ ಹಿರಿಯ ನಾಗರಿಕರ ಜೀವನಶೈಲಿ,ಅಭಿರುಚಿಗಳಿಗೆ ಹತ್ತಿರವಾಗಬಲ್ಲದು. ಹಿರಿಯರ ಬದುಕಿನಲ್ಲಿ ಹೊಸ ಪರಿವರ್ತನೆಗಳೊಂದಿಗೆ ಸದಾ ನೆಮ್ಮದಿ ಹಾಗೂ ಸಮೃದ್ಧತೆ ಇರಲಿ” ಎಂದು ಶುಭಹಾರೈಸಿದರ

‘ಉಜ್ಜೀವನ’ ಹಿರಿಯ ನಾಗರಿಕರ ಬಡಾವಣೆಯನ್ನು ಮಾಜಿ ಶಾಸಕರಾದ ಶ್ರೀ ಸಂಜೀವ ಮಠಂದೂರು ಅವರು ಲೋಕಾರ್ಪಣೆ ಮಾಡಿದರು. ನಂತರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು “ಭಾರತದಲ್ಲಿ ಕೂಡು ಕುಟುಂಬದ ಸಂಸ್ಕೃತಿ ಇದೆ. ಕುಟುಂಬಗಳ ಒಳಗೆ ಒಗ್ಗಟ್ಟು ವೃದ್ಧಿಯಾಗಿ ಅವಿಭಕ್ತ ಕುಟುಂಬಗಳು ಉಳಿಯಬೇಕಿದೆ. ದ್ವಾರಕಾ ಸಂಸ್ಥೆ ನಿರ್ಮಿಸಿದ ಬಡಾವಣೆ ಹಿರಿಯ ನಾಗರಿಕರ ಜೀವನಶೈಲಿ,ಅಭಿರುಚಿಗಳಿಗೆ ಹತ್ತಿರವಾಗಬಲ್ಲದು. ಹಿರಿಯರ ಬದುಕಿನಲ್ಲಿ ಹೊಸ ಪರಿವರ್ತನೆಗಳೊಂದಿಗೆ ಸದಾ ನೆಮ್ಮದಿ ಹಾಗೂ ಸಮೃದ್ಧತೆ ಇರಲಿ” ಎಂದು ಶುಭಹಾರೈಸಿದರು.

ದ್ವಾರಕಾ ನೆಸ್ಟ್ ಲೋಕಾರ್ಪಣೆ

ಕರ್ನಾಟಕ ವಿಧಾನ ಪರಿಷತ್ತಿನ ಶಾಸಕರಾದ ಶ್ರೀ ಕಿಶೋರ್ ಕುಮಾರ್ ಬೊಟ್ಯಾಡಿ ಅವರು ‘ದ್ವಾರಕಾ ನೆಸ್ಟ್’ನ್ನು ಲೋಕಾರ್ಪಣೆಗೊಳಿಸಿದರು. ನಂತರ ಮಾತನಾಡಿದ ಅವರು “ಮಕ್ಕಳ, ಕುಟುಂಬದ ಯಶಸ್ಸಿಗಾಗಿ ಜೀವನವನ್ನು ಮುಡಿಪಾಗಿಡುವ ಪೋಷಕರ ಬಾಳು ಸುಖವಾಗಿರಬೇಕು. ಹಿರಿಯರ ಮುಪ್ಪಿನ ಲಕ್ಷಣಗಳು ಅವರು ಕಷ್ಟ ಸುಖಗಳನ್ನು ಕಂಡು ಬದುಕನ್ನು ಜಯಿಸಿದ ಪ್ರತೀಕವಾಗಿದೆ. ಅಂತಹ ಹಿರಿಯರ ಬದುಕಿಗೆ ದಾರಿದೀಪವಾಗಬಲ್ಲ ಕಾರ್ಯವನ್ನು ಮಾಡಿದ ದ್ವಾರಕಾ ಸಂಸ್ಥೆಯನ್ನು ಮೆಚ್ಚಬೇಕು” ಎಂದರು.

ದ್ವಾರಕಾ ರಿಫ್ರೆಶ್ಮೆಂಟ್ ಮತ್ತು ದ್ವಾರಕಾ ಮಾರ್ಟ್ ಲೋಕಾರ್ಪಣೆ

‘ದ್ವಾರಕಾ ರಿಫ್ರೆಶ್ಮೆಂಟ್’ ಮತ್ತು ‘ದ್ವಾರಕಾ ಮಾರ್ಟ್’ಅನ್ನು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ರಮೇಶ ಉಪ್ಪಂಗಳ ಅವರು ಲೋಕಾರ್ಪಣೆ ಮಾಡಿದರು. ನಂತರ ಅವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ದ್ವಾರಕಾ ಸಂಸ್ಥೆಯ ಕಾರ್ಯಗಳ ಬಗ್ಗೆ ಮೆಚ್ಚುಗೆ ಸೂಚಿಸಿ ಶುಭಹಾರೈಸಿದರು.

ಉಜ್ಜೀವನ ಬಡಾವಣೆಯ ಪರಿಸರದಲ್ಲಿ ದ್ವಾರಕಾ ಕಾರ್ಪ್.ಪ್ರೈ.ಲಿ ಸಂಸ್ಥೆಯ ವತಿಯಿಂದ ಸ್ಥಾಪಿಸಲಾದ ಬಸ್ ತಂಗುದಾಣವನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ಅವರು ಲೋಕಾರ್ಪಣೆಗೊಳಿಸಿದರು. ನಂತರ ಕಾರ್ಯಕ್ರಮದ ಕುರಿತಾಗಿ ಹಿತನುಡಿಗಳನ್ನಾಡಿದ ಅವರು “ಹಿರಿಯರು ಸಮಾಜದೊಡನೆ ಹಾಗೂ ತಮ್ಮ ಸಮಾನಮನಸ್ಕರೊಡನೆ ಬೆರೆತಾಗ ಖುಷಿಯನ್ನನುಭವಿಸುತ್ತಾರೆ” ಎಂದು ತಿಳಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ದ್ವಾರಕಾ ಕಾರ್ಪ್. ಪ್ರೈ. ಲಿ. ಇದರ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಗೋಪಾಲಕೃಷ್ಣ ಭಟ್ಟ ಅರ್ತ್ಯಡ್ಕ ಅವರು ಮಾತನಾಡಿ “ಉಜ್ಜೀವನ ಬಡಾವಣೆಯಲ್ಲಿ ಹಲವಾರು ಸೌಲಭ್ಯಗಳ ನಿರ್ಮಾಣ ಕಾರ್ಯವು ಪ್ರಗತಿಯಲ್ಲಿದೆ. ಉದ್ಯಮವೊಂದರಲ್ಲಿ ಹೊಸತನವಿದ್ದಾಗ ಅದು ಯಶಸ್ವಿಯಾಗುತ್ತದೆ. ಅಲ್ಲದೇ ಸಮಾಜದಲ್ಲಿ ಹೊಸ ಪರಿವರ್ತನೆಗಳಿಗೂ ಕಾರಣವಾಗುತ್ತದೆ. ಸಂಸ್ಥೆ ಒದಗಿಸುವ ಸೌಲಭ್ಯಗಳಿಂದ ಸಮಾಜಕ್ಕೆ ಉಪಯೋಗವಾದಾಗ ಸಂಸ್ಥೆಯ ಪ್ರಯತ್ನ ಸಾರ್ಥಕ ” ಎಂದರು.

ಹಿರಿಯ ನಾಗರಿಕರ ಬಡಾವಣೆಗಳ ಸಲಹೆಗಾರರಾದ ಡಾ. ಮುರಳೀಧರ ಅವರು “ಹಿರಿಯರಿಗೆ ಭದ್ರತೆ, ಸಂತೋಷ, ಮಾನಸಿಕ ಸ್ವಾಸ್ಥ್ಯ, ಜೀವನ ಗುಣಮಟ್ಟ ವೃದ್ಧಿಸುವ ವ್ಯವಸ್ಥೆಗಳನ್ನು ಹಿರಿಯ ನಾಗರಿಕರ ಬಡಾವಣೆಗಳಲ್ಲಿ ಒದಲಾಗಿಸಲಾಗುತ್ತದೆ ” ಎಂದು ಹೇಳಿ ಹಿರಿಯ ನಾಗರಿಕರ ಬಡಾವಣೆಗಳ ಕುರಿತಾಗಿ ಮಾಹಿತಿಯನ್ನು ನೀಡಿದರು.

ಪುತ್ತೂರಿನ ಮಾಸ್ಟರ್ ಪ್ಲ್ಯಾನರಿ ಸಂಸ್ಥೆಯ ಶ್ರೀ ಎಸ್.ಕೆ ಆನಂದ್ ಕುಮಾರ್, ರಾಮಕುಂಜದ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿಗಳಾದ ಶ್ರೀ ರಾಧಾಕೃಷ್ಣ ಕೆ. ಎಸ್ ಹಾಗೂ ಬೆಂಗಳೂರಿನ ಉದ್ಯಮಿಗಳಾದ ಶ್ರೀ ಡಾ. ಹೇಮಂತ ರೈ ಮನವಳಿಕೆ ಅವರು ಮಾತನಾಡಿ ಶುಭಾಶಂಸನೆಗೈದರು. ಈ ಸಂದರ್ಭದಲ್ಲಿ ಉಜ್ಜೀವನ ಬಡಾವಣೆಯ ವಿವಿಧ ನಿರ್ಮಾಣ ಕಾರ್ಯಗಳನ್ನು ಮಾಡಿದವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಚಿನ್ ಟ್ರೇಡರ್ಸ್ ಇದರ ಮಾಲಕರಾದ ಶ್ರೀ ಮಂಜುನಾಥ ನಾಯಕ್, ದ್ವಾರಕಾ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಶ್ರೀ ಹರಿಕೃಷ್ಣ ಭಟ್ಟ ಅರ್ತ್ಯಡ್ಕ, ದ್ವಾರಕಾ ಪ್ರತಿಷ್ಠಾನದ ನಿರ್ದೇಶಕರಾದ ಶ್ರೀಮತಿ ಲಕ್ಷ್ಮೀ ಅಮ್ಮ ಅರ್ತ್ಯಡ್ಕ, ದ್ವಾರಕಾ ಕಾರ್ಪ್. ಪ್ರೈ. ಲಿ ಸಂಸ್ಥೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಅಶ್ವಿನಿ ಎನ್. ಮತ್ತು ಇತರರು ಉಪಸ್ಥಿತರಿದ್ದರು. ಸಂಸ್ಥೆಯ ಸಿಬ್ಬಂದಿ ಶ್ರೀ ನವೀನಕೃಷ್ಣ ಎಸ್. ಉಪ್ಪಿನಂಗಡಿ ಅವರು ವಂದಿಸಿದರು. ದ್ವಾರಕಾ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಶ್ರೀ ಗಣರಾಜ ಕುಂಬ್ಳೆ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು.

ಸಾಂಸ್ಕೃತಿಕ ಕಾರ್ಯಕ್ರಮ

ಈ ಸುಸಂದರ್ಭದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಗಾಯಕ ಶ್ರೀ ರಾಹುಲ್ ವೆಲ್ಲಾಲ್ ಬೆಂಗಳೂರು ಮತ್ತು ಬಳಗದವರಿಂದ ‘ಭಕ್ತಿ ಸಂಗೀತ ಸುಧಾ’ ಶಾಸ್ತ್ರೀಯ ಸಂಗೀತ ಕಛೇರಿ ಕಾರ್ಯಕ್ರಮ ನಡೆಯಿತು. ಸಹಕಲಾವಿದರಾಗಿ ಮೃದಂಗದಲ್ಲಿ ಶ್ರೀ ವಿದ್ವಾನ್ ಎಸ್. ಪಿ. ನಾಗೇಂದ್ರ ಪ್ರಸಾದ್ , ವಯೋಲಿನ್ ವಾದನದಲ್ಲಿ ಶ್ರೀ ವಿದ್ವಾನ್ ಜನಾರ್ದನ್ ಶ್ರೀನಾಥ್ ಹಾಗೂ ಘಟಂನಲ್ಲಿ ಶ್ರೀ ವಿದ್ವಾನ್ ಶಮಿತ್ ಗೌಡ ಸಹಕರಿಸಿದರು.

Dwaraka Constructions Ad

Related Blog

karnataka volleyball team secures national runner up
ಪಟ್ಟೆ ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ವಾಲಿಬಾಲ್ ತಂಡ ರಾಷ್ಟ್ರ ಮಟ್ಟದಲ್ಲಿ ದ್ವಿತೀಯ ಸ್ಥಾನ
ಪಟ್ಟೆ ಶ್ರೀ ಕೃಷ್ಣ ವಿದ್ಯಾ ಸಂಸ್ಥೆ ಗಳ ವಿದ್ಯಾರ್ಥಿಗಳು ಕ್ಷೇತ್ರೀಯ ಮಟ್ಟದ ವಿದ್ಯಾ ಭಾರತಿ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆ
guru prsshasti award fetured image
ಪಟ್ಟೆ ಶ್ರೀಕೃಷ್ಣ ವಿದ್ಯಾ ಸಂಸ್ಥೆಯಲ್ಲಿ ಶ್ರೀಕೃಷ್ಣ ಲೀಲೆ 2026 ಮತ್ತು ಸಾಂದೀಪನಿ ಗುರುಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮ