ಶ್ರೀ ಕೃಷ್ಣ ಆಂಗ್ಲ ಮಾಧ್ಯಮ ಶಾಲೆಯಲ್ಲಿ 5 ಸ್ಮಾರ್ಟ್ ಟಿವಿಗಳ ಅಳವಡಿಕೆ

November 12, 2026
featured image

ಪಟ್ಟೆ : ದಿನಾಂಕ 11-11-2026, ಬುಧವಾರದಂದು ಶ್ರೀ ಕೃಷ್ಣ ಆಂಗ್ಲ ಮಾಧ್ಯಮ ಶಾಲೆಯಲ್ಲಿ 5 ಸ್ಮಾರ್ಟ್ ಟಿವಿಗಳ ಅಳವಡಿಕೆ ಕಾರ್ಯಕ್ರಮವು ನಡೆಯಿತು.

ಸಂಸ್ಥೆಯ ಸಂಚಾಲಕರಾದ ಶ್ರೀ ವಿಘ್ನೇಶ್ ಹಿರಣ್ಯ ಅವರು ಸ್ಮಾರ್ಟ್ ಟಿವಿಯನ್ನು ಉದ್ಘಾಟಿಸಿ “ಸ್ಮಾರ್ಟ್ ಟಿವಿಯ ಉಪಯೋಗಗಳು ಹಾಗೂ ಅದರ ಪರಿಣಾಮಕಾರಿ ಬಳಕೆಯ ಕುರಿತು ಮಕ್ಕಳಿಗೆ ತಿಳಿಸಿದರು. ಅಲ್ಲದೆ, ಸಂಸ್ಥೆಯ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಭಟ್ ಅವರ ಆಶಯದಂತೆ ಚಟುವಟಿಕೆ ಆಧಾರಿತ ಶಿಕ್ಷಣವನ್ನು ಉತ್ತೇಜಿಸುವಲ್ಲಿ ಸ್ಮಾರ್ಟ್ ಟಿವಿಯು ಮಹತ್ವದ ಪಾತ್ರ ವಹಿಸಲಿದೆ ಹಾಗೂಆಧುನಿಕ ತಂತ್ರಜ್ಞಾನದ ಮೂಲಕ ಕಲಿಕೆಯನ್ನು ಹೆಚ್ಚು ಆಸಕ್ತಿದಾಯಕ, ಪರಿಣಾಮಕಾರಿಯಾಗಿ ಮತ್ತು ಮಕ್ಕಳ ಸ್ನೇಹಿಯಾಗಿಸಲು ಈ ಸ್ಮಾರ್ಟ್ ಟಿವಿಯು ಸಹಕಾರಿಯಾಗಲಿದೆ” ಎಂದು ತಿಳಿಸಿದರು .

ಈ ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ವಿದ್ಯಾಸಂಸ್ಥೆಯ ಮುಖ್ಯಸ್ಥರುಗಳಾದ ಸುಮನ ಮಾತಾಜಿ, ಶ್ರೀಮಾನ್ ರಾಜಗೋಪಾಲ್ ಹಾಗೂ ಶ್ರೀಮತಿ ಪುಷ್ಪಾವತಿ ಬಿ. ಮಾತಾಜಿಯವರು ಉಪಸ್ಥಿತರಿದ್ದರು.ಕಾರ್ಯಕ್ರಮದ ನಿರೂಪಣೆಯನ್ನು ಸೌಮ್ಯ ಮಾತಾಜಿಯವರು ನೆರವೇರಿಸಿ,ನಾಲ್ಕನೇ ತರಗತಿಯ ವಿದ್ಯಾರ್ಥಿನಿ ಧನ್ವಿತ ಸ್ವಾಗತ ಮಾಡಿದರು. ನಾಲ್ಕನೇ ತರಗತಿಯ ವಿದ್ಯಾರ್ಥಿನಿ ಯಶ್ವಿಕ ಎಸ್. ವಂದನಾರ್ಪಣೆ ಸಲ್ಲಿಸಿದರು.

Dwaraka Constructions Ad

Related Blog

Nidhishodhane
ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ನಿಧಿಶೋಧನೆಯಲ್ಲಿ ಪ್ರಥಮ ಸ್ಥಾನ
ಶ್ರೀ ಕೃಷ್ಣ ಆಂಗ್ಲ ಮಾಧ್ಯಮ ಶಾಲೆಯಲ್ಲಿ 5 ಸ್ಮಾರ್ಟ್ ಟಿವಿಗಳ ಅಳವಡಿಕೆ
Dwaraka commercial
ದ್ವಾರಕಾ ಕರ್ಮಶಿಯಲ್ಸ್ ಲೋಕಾರ್ಪಣದ ಆಮಂತ್ರಣ ಪತ್ರ ಬಿಡುಗಡೆ