ದಿನಾಂಕ 07-11-2026ರ ಶನಿವಾರದಂದು ಕುಂಬ್ರ ಕೆಪಿಎಸ್‌ಸಿ ಶಾಲೆಯಲ್ಲಿ ನಡೆದ ಕುಂಬ್ರ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕಿರಿಯರ ವಿಭಾಗದಲ್ಲಿ ಶ್ರೀ ಕೃಷ್ಣ ಆಂಗ್ಲ ಮಾಧ್ಯಮ ಶಾಲೆ, ಪಟ್ಟೆ, ಇಲ್ಲಿನ ವಿದ್ಯಾರ್ಥಿಗಳು ಭಾಗವಹಿಸಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ವಿವಿಧ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಬಹುಮಾನ ವಿಜೇತ ವಿದ್ಯಾರ್ಥಿಗಳ ವಿವರಗಳು:
- ಧಾರ್ಮಿಕ ಪಠಣ (ಸಂಸ್ಕೃತ): ಧನ್ವಿತ – ಪ್ರಥಮ ಬಹುಮಾನ.
- ದೇಶಭಕ್ತಿ ಗೀತೆ : ಯಶ್ವಿಕ ಎಸ್. – ಪ್ರಥಮ ಬಹುಮಾನ.
- ಆಶುಭಾಷಣ: ಪ್ರಣ್ವಿತ್ ರೈ – ಪ್ರಥಮ ಬಹುಮಾನ.
- ಕಥೆ ಹೇಳುವುದು: ಸಾಯಿಜನ್ಯ ಬಿ. – ದ್ವಿತೀಯ ಬಹುಮಾನ.
- ಧಾರ್ಮಿಕ ಪಠಣ (ಅರೇಬಿಕ್): ಸಾದ್ ಸಲಾಮಿ – ತೃತೀಯ ಬಹುಮಾನ.
- ಕ್ಲೇ ಮಾಡೆಲಿಂಗ್: ನಿಶಾನ್ – ತೃತೀಯ ಬಹುಮಾನ.
ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಹಾಗೂ ಬಹುಮಾನಗಳನ್ನು ಗಳಿಸಿ ಶಾಲೆಗೆ ಕೀರ್ತಿ ತಂದ ಎಲ್ಲಾ ವಿಜೇತ ವಿದ್ಯಾರ್ಥಿಗಳಿಗೂ ಹೃತ್ಪೂರ್ವಕ ಅಭಿನಂದನೆಗಳು. ವಿದ್ಯಾರ್ಥಿಗಳ ಈ ಸಾಧನೆಗೆ ಮಾರ್ಗದರ್ಶನ ನೀಡಿದ ಶಿಕ್ಷಕರಿಗೂ ಹಾಗೂ ಪ್ರೋತ್ಸಾಹಿಸಿದ ಪೋಷಕರಿಗೂ ಸಂಸ್ಥೆಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು.
ಇದೇ ರೀತಿ ಮುಂದಿನ ದಿನಗಳಲ್ಲಿಯೂ ವಿದ್ಯಾರ್ಥಿಗಳು ಇನ್ನಷ್ಟು ಸಾಧನೆಗಳನ್ನು ಮಾಡಿ ಶಾಲೆಗೆ ಕೀರ್ತಿ ತರಲಿ ಎಂದು ಹಾರೈಸುತ್ತೇವೆ.