ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳು ಪಟ್ಟೆ -ವಿನಾಯಕ ಚೌತಿ ಹಬ್ಬದ ಪ್ರಯುಕ್ತ ಯಕ್ಷಗಾನ ತಾಳಮದ್ದಳೆ

September 15, 2026
Shrikrishna educational trust
ಪಟ್ಟೆ ಬಡಗನ್ನೂರು : ವಿನಾಯಕ ಚೌತಿ ಹಬ್ಬದ ಪ್ರಯುಕ್ತ ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ ಸಭಾಭವನದಲ್ಲಿ ದಿನಾಂಕ 14/09/2026ನೇ ಸೋಮವಾರದಂದು ಬೆಳಿಗ್ಗೆ ಶ್ರೀ ಮಹಾಗಣಪತಿ ಹೋಮ ನಡೆಯಿತು. ಬೆಳಿಗ್ಗೆ 10ಗಂಟೆಯಿಂದ "ಅತಿಕಾಯ ಕಾಳಗ" ಎಂಬ ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಕು|ರಚನಾ ಚಿದ್ಗಲ್, ಚೆಂಡೆ -ಮದ್ದಳೆ -ಚಕ್ರತಾಳದಲ್ಲಿ ಶ್ರೀ ಲಕ್ಷ್ಮೀಶ ಶಗ್ರಿತ್ತಾಯ,10ನೇ ತರಗತಿಯ ಶ್ರೀ ಆದಿತ್ಯಕೃಷ್ಣ ದ್ವಾರಕಾ,9ನೇ ತರಗತಿಯ ಶ್ರೀ ಸ್ವರೂಪ್ ಭಾಗವಹಿಸಿದ್ದರು. ಮುಮ್ಮೇಳದಲ್ಲಿ- ಪಾತ್ರದಾರಿಗಳಾಗಿ,ಅತಿಕಾಯನಾಗಿ, ಶ್ರೀ ಗಣರಾಜ ಕುಂಬ್ಳೆ, ರಾವಣನಾಗಿ ಶ್ರೀ ವೆಂಕಟರಾಮ ಭಟ್ ಸುಳ್ಯ, ಲಕ್ಷ್ಮಣನಾಗಿ ಶ್ರೀ ಈಶ್ವರಪ್ರಸಾದ ಧರ್ಮಸ್ಥಳ, ರಾಮನಾಗಿ ಶ್ರೀ ಕೃಷ್ಣಮೂರ್ತಿ ಭಟ್ ಕೆಮ್ಮಾರ, ವಿಭೀಷಣನಾಗಿ ಶ್ರೀ ನವೀನಕೃಷ್ಣ ಎಸ್, ಉಪ್ಪಿನಂಗಡಿ ಭಾಗವಹಿಸಿದ್ದರು.

ಪಟ್ಟೆ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಭಟ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ನೆರೆದಿರುವ ಕಲಾವಿದರನ್ನು ಸ್ವಾಗತಿಸಿದರು. ಉಪಾಧ್ಯಕ್ಷರಾದ ಶ್ರೀ ಅಮೃತ ಕೃಷ್ಣ ಕಲಾವಿದರಿಗೆ ಶಾಲು ಹಾಕಿ ಸ್ವಾಗತಿಸಿದರು.
ಈ ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ ನಿರ್ದೇಶಕರಾದ ಶ್ರೀಮತಿ ಅಶ್ವಿನಿ ಗೋಪಾಲಕೃಷ್ಣ ಭಟ್, ಶ್ರೀ ಜಿ,ಪರಮೇಶ್ವರ್ ಭಟ್, ಶ್ರೀ ವೆಂಕಟಕೃಷ್ಣಭಟ್ ಸಂಚಾಲಕರಾದ ವಿಘ್ನೇಶ್ ಹಿರಣ್ಯ ಮತ್ತು ಊರಿನ ಕಲಾ ಪೋಷಕರು, ವಿದ್ಯಾರ್ಥಿಗಳು ಶ್ರೀಕೃಷ್ಣ ವಿದ್ಯಾಸಂಸ್ಥೆಯ ಶಿಕ್ಷಕರು ಭಾಗವಹಿಸಿದ್ದರು.

ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ ನಿರ್ದೇಶಕರಾದ ಶ್ರೀಗಣರಾಜ ಕುಂಬ್ಳೆ ಅವರು ಕಾರ್ಯಕ್ರಮ ನಿರೂಪಿಸಿದರು.ತಾಳಮದ್ದಳೆಯ ತರುವಾಯ ಮಧ್ಯಾಹ್ನ ಎಲ್ಲರೂ ಭೋಜನವನ್ನು ಸ್ವೀಕರಿಸಿದರು.
Dwaraka Constructions Ad

Related Blog

Shrikrishna educational trust
ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳು ಪಟ್ಟೆ -ವಿನಾಯಕ ಚೌತಿ ಹಬ್ಬದ ಪ್ರಯುಕ್ತ ಯಕ್ಷಗಾನ ತಾಳಮದ್ದಳೆ
Shrikrishna educational trust
ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳಲ್ಲಿ ಅಭಿನಂದನಾ ಕಾರ್ಯಕ್ರಮ
karnataka volleyball team secures national runner up
ಪಟ್ಟೆ ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ವಾಲಿಬಾಲ್ ತಂಡ ರಾಷ್ಟ್ರ ಮಟ್ಟದಲ್ಲಿ ದ್ವಿತೀಯ ಸ್ಥಾನ