ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳಲ್ಲಿ ಗುರು ಪೂರ್ಣಿಮಾ ವೇದವ್ಯಾಸ ಜಯಂತಿ ಆಚರಣೆ.

July 30, 2026

ಪಟ್ಟೆ ಬಡಗನ್ನೂರು : “ವೇದವ್ಯಾಸರ ಹೆಸರಲ್ಲಿರುವ ವೇದ ಹಾಗೂ ವ್ಯಾಸ ಎಂಬುವುದರಲ್ಲಿ ಅವರು ಮಾಡಿರುವಂತಹ ಕೆಲಸ ಅಡಗಿದೆ.ವೇದವ್ಯಾಸರು ಹಿಂದೂ ಧರ್ಮದಲ್ಲಿ ಅತ್ಯಂತ ಪೂಜನೀಯರು. ವೇದವ್ಯಾಸ ಮಹರ್ಷಿಗಳ ಅಪಾರ ಜ್ಞಾನ ಪರೋಪಕಾರ ದೃಷ್ಟಿ ನಮ್ಮೆಲ್ಲರ ಜೀವನಕ್ಕೂ ಆದರ್ಶವಾಗಲಿ” ಎಂದು ಪಟ್ಟೆ ಶ್ರೀ ಕೃಷ್ಣವಿದ್ಯಾ ಸಂಸ್ಥೆಗಳ ನಿರ್ದೇಶಕರಾದ ಶ್ರೀಮಾನ್ ಗಣರಾಜ ಕುಂಬ್ಳೆಯವರು ವೇದವ್ಯಾಸ ಜಯಂತಿ ಆಚರಣೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಮಾತನಾಡಿದರು.


ದಿನಾಂಕ 29/0 7/2026ರಂದು ಪಟ್ಟೆ ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳಲ್ಲಿ ಗುರುಪೂರ್ಣಿಮಾ ವೇದ ವ್ಯಾಸ ಜಯಂತಿ ಆಚರಣೆಯನ್ನು ಆಚರಿಸಲಾಯಿತು.


ಪ್ರಾಸ್ತಾವಿಕ ಮಾತುಗಳನ್ನಾಡಿದ ಸಂಸ್ಥೆಯ ಸಂಚಾಲಕರಾದ ಶ್ರೀಮಾನ್ ವಿಘ್ನೇಶ್ ಹಿರಣ್ಯ ಅವರು ವೇದವ್ಯಾಸ ಜಯಂತಿಯ ಆಚರಣೆ ಮಹತ್ವವನ್ನು ವಿದ್ಯಾರ್ಥಿಗೆ ತಿಳಿಯಪಡಿಸಿದರು. ಮುಖ್ಯ ಅತಿಥಿಗಳಾಗಿ ಪ್ರತಿಭಾ ಪ್ರೌಢಶಾಲೆಯ SDMC ಅಧ್ಯಕ್ಷರಾದ ಶ್ರೀ ಲಿಂಗಪ್ಪ ಗೌಡ ಮೂಡಿಕೆ,ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯ SDMC ಅಧ್ಯಕ್ಷರಾದ ಶ್ರೀ ಕೇಶವ ಪ್ರಸಾದ್ ನೀಲಗಿರಿ, ಶ್ರೀಕೃಷ್ಣ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಸತೀಶ್ ಕೊಪ್ಪಳ, ಪ್ರೌಢಶಾಲಾ ಮುಖ್ಯಗುರುಗಳು ಶ್ರೀಮತಿ ಸುಮನಾ ಬಿ., ಪ್ರಾಥಮಿಕ ಶಾಲಾ ಮುಖ್ಯ ಗುರುಗಳು ರಾಜಗೋಪಾಲ್ ಎನ್., ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಗುರುಗಳು ಶ್ರೀಮತಿ ಪುಷ್ಪಾವತಿಯವರು ಉಪಸ್ಥಿತರಿದ್ದರು.


ಒಂದರಿಂದ ನಾಲ್ಕನೇ ತರಗತಿ ವಿದ್ಯಾರ್ಥಿಗಳಿಗಾಗಿ ಮಹಾಭಾರತದ ಚಲನ ಚಿತ್ರವನ್ನು ಪ್ರದರ್ಶನ ಮಾಡಲಾಯಿತು. ಐದನೇ ತರಗತಿ ವಿದ್ಯಾರ್ಥಿಗಳು ಮಹರ್ಷಿ ವೇದವ್ಯಾಸರ ಮಹಿಮೆ ಎಂಬ ರೂಪಕವನ್ನು ಪ್ರದರ್ಶಿಸಿದರು. 6ನೇ ತರಗತಿಯ ವಿದ್ಯಾರ್ಥಿಗಳು ಭಗವದ್ಗೀತೆಯನ್ನು ಪಠಣ ಮಾಡಿದರು. ಏಳನೇ ತರಗತಿ ವಿದ್ಯಾರ್ಥಿಗಳು ಸಪ್ತ ಋಷಿಗಳ ಪರಿಚಯವನ್ನು ಮಾಡಿಕೊಟ್ಟರು. ಎಂಟನೇ ತರಗತಿಯ ವಿದ್ಯಾರ್ಥಿಗಳು ಮಹಾಭಾರತದ ಉಪಾಖ್ಯಾನಗಳನ್ನು ಹೇಳಿದರು. 9ನೇ ತರಗತಿ ವಿದ್ಯಾರ್ಥಿಗಳಿಂದ ಶ್ರೀಮದ್ ಭಗವದ್ಗೀತೆಯ 15ನೇ ಅಧ್ಯಾಯದ 20 ಶ್ಲೋಕಗಳನ್ನು ಪಠಣ ಮಾಡಿದರು. ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಮಹಾಭಾರತಕ್ಕೆ ಸಂಬಂಧಪಟ್ಟ ರಸಪ್ರಶ್ನೆಯನ್ನು ನಡೆಸಲಾಯಿತು. ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳ ಶಿಕ್ಷಕ ವರ್ಗದವರು ಈ ಎಲ್ಲಾ ಕಾರ್ಯಕ್ರಮಗಳನ್ನು ನಿರ್ವಹಿಸಿದರು.


ಶ್ರೀಮತಿ ಸುಮನಾ ಬಿ. ಸ್ವಾಗತಿಸಿ, ಶ್ರೀಮತಿ ಪುಷ್ಪಾವತಿ ಧನ್ಯವಾದಗಳನ್ನಿತರು. ಶ್ರೀಮತಿ ಚಿತ್ರಾ ಕಾರ್ಯಕ್ರಮ ನಿರೂಪಿಸಿದರು.

Dwaraka Constructions Ad

Related Blog

kanakabhiyana ramadhanya charite gamaka
ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳು ಪಟ್ಟೆ, ಬಡಗನ್ನೂರು ಕನಕಾಭಿಯಾನ -ರಾಮಧಾನ್ಯ ಚರಿತೆ -ಗಮಕ
Shrikrishna educational trust
ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳು ಪಟ್ಟೆ -ವಿನಾಯಕ ಚೌತಿ ಹಬ್ಬದ ಪ್ರಯುಕ್ತ ಯಕ್ಷಗಾನ ತಾಳಮದ್ದಳೆ
Shrikrishna educational trust
ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳಲ್ಲಿ ಅಭಿನಂದನಾ ಕಾರ್ಯಕ್ರಮ