ದ್ವಾರಕಾ ಕಾರ್ಪೊರೇಷನ್ ಪ್ರೈ.ಲಿ. ವತಿಯಿಂದ ಪುತ್ತೂರಿನ ದರ್ಬೆಯ ಬೈಪಾಸ್ ಸರ್ಕಲ್ ಬಳಿ ನಿರ್ಮಾಣಗೊಂಡ ನೂತನ ಅತ್ಯಾಧುನಿಕ ವಿನ್ಯಾಸದ ‘ದ್ವಾರಕಾ ಕಮರ್ಷಿಯಲ್ಸ್’ ಕಟ್ಟಡದ ಲೋಕಾರ್ಪಣಾ ಕಾರ್ಯಕ್ರಮ ಶುಕ್ರವಾರ ನ.27ರಂದು ಜರುಗಿತು.
ದ್ವಾರಕಾ ಕಮರ್ಷಿಯಲ್ಸ್ ಇದರ ಎಲ್ಇಡಿ ಫಲಕವನ್ನು ಹಿರಿಯ ಉದ್ಯಮಿ ಶ್ರೀ ಮಂಜುನಾಥ ನಾಯಕ್ ಅವರು ಉದ್ಘಾಟಿಸಿದರು. ದ್ವಾರಕಾ ಕಮರ್ಷಿಯಲ್ಸ್ ನಾಮಫಲಕವನ್ನು ಅಶ್ವಿನಿ ಹೋಟೆಲ್ ನ ಮಾಲಕರಾದ ಶ್ರೀ ಕರುಣಾಕರ ರೈ ದೇರ್ಲ ಉದ್ಘಾಟಿಸಿದರು.
ದ್ವಾರಕಾ ಮಂಗಲ್ಸ್ ಹೈಪರ್ ಮಾರ್ಕೆಟ್ ಅನ್ನು ರಿಬ್ಬನ್ ಬಿಡಿಸಿ ರಾಜ್ಯ ಸಹಕಾರಿ ಮಹಾಮಂಡಲದ ಅಧ್ಯಕ್ಷ ಶ್ರೀ ಶಶಿಕುಮಾರ್ ರೈ ಬಾಲ್ಯೊಟ್ಟು ಉದ್ಘಾಟಿಸಿದರು. ದ್ವಾರಕಾ ಮಂಗಲ್ಸ್ ನಲ್ಲಿ ದೀಪೋಜ್ವಲನವನ್ನು ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಶ್ರೀ ಜಯಂತ ನಡುಬೈಲು ಅವರು ನೆರವೇರಿಸಿದರು .
ದ್ವಾರಕಾ ಮಂಗಲ್ಸ್ ಪೋಪ್ಯುಲರ್ ಬೇಕರಿ ಫಲಕ ವನ್ನು ಹಿಂದು ಮುಖಂಡ ಶ್ರೀ ಅರುಣ್ ಕುಮಾರ್ ಪುತ್ತಿಲ ಅನಾವರಣಗೊಳಿಸಿದರು. ಎಸ್ಎಲ್ ವಿ ಪುಸ್ತಕಾಲಯವನ್ನು ಪದ್ಮಶ್ರೀ ಡಾ. ಶ್ರೀ ಹರೇಕಳ ಹಾಜಬ್ಬ ಉದ್ಘಾಟಿಸಿದರು. ಸತ್ತ್ವಂ ಪ್ರಾಡಕ್ಟ್ಸ್ ಕೌಂಟರ್ ಅನ್ನು ಐಶ್ವರ್ಯ ಕನ್ಸ್ಸ್ಟ್ರಕ್ಷನ್ ನ ಶ್ರೀ ರಘುರಾಮ ಭಟ್ಟ ಉಪ್ಪಂಗಳ ಉದ್ಘಾಟಿಸಿದರು.
ದ್ವಾರಕಾ ಮಂಗಲ್ಸ್ ಕ್ಯಾಶ್ ಕೌಂಟರ್ ಅನ್ನು ಗಣ್ಯರಾದ ಶ್ರೀ ಶ್ರೀನಿವಾಸ ಪೈ ಹಾಗೂ ಬೂಡಿಯಾರ್ ಶೈರ ರಾಧಾಕೃಷ್ಣ ರೈ ಉದ್ಘಾಟಿಸಿದರು. ದ್ವಾರಕಾ ಮಂಗಲ್ಸ್ ಚಾಟ್ಸ್ ಕೌಂಟರ್ ಅನ್ನು ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲರಾದ ಡಾ. ರೆ. ಡಾ. ಆಂಟನಿ ಪ್ರಕಾಶ್ ಮೊಂತೇರೋ ಉದ್ಘಾಟಿಸಿದರು.
ಬಳಿಕ ಸಭಾ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ್ವಾರಕಾ ಪ್ರತಿಷ್ಠಾನದ ಗೌರವಾಧ್ಯಕ್ಷ ಶ್ರೀ ಹರಿಕೃಷ್ಣ ಅರ್ತ್ಯಡ್ಕ ಅವರು ವಹಿಸಿದ್ದರು. ಸಭಾ ವೇದಿಕೆಯಲ್ಲಿ ಅತಿಥಿಗಳ ಸಹಿತ ದ್ವಾರಕಾ ಸಮೂಹ ಸಂಸ್ಥೆಗಳ ಮ್ಯಾನೆಜಿಂಗ್ ಡೈರೆಕ್ಟರ್ ಶ್ರೀ ಗೋಪಾಲಕೃಷ್ಣ ಭಟ್ಟ ಅರ್ತ್ಯಡ್ಕ , ಅಸೋಸಿಯೇಟ್ ಡೈರೆಕ್ಟರ್ ಶ್ರೀಮತಿ ಅಶ್ವಿನಿ ಗೋಪಾಲಕೃಷ್ಣ ಭಟ್ಟ, ಎಕ್ಸಿಕ್ಯೂಟಿವ್ ಡೈರೆಕ್ಟರ್ ಶ್ರೀ ಅಮೃತ ಕೃಷ್ಣ ಎನ್., ನಿರ್ದೇಶಕಿ ಶ್ರೀಮತಿ ಅಮೃತಾ ಶಾನುಭಾಗ್, ಪುತ್ತೂರು ಮಹೋತಾಭಾರ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಶ್ರೀ ಈಶ್ವರ ಭಟ್ಟ, ಪುಡಾದ ಅಧ್ಯಕ್ಷ ಶ್ರೀ ಅಮಳ ರಾಮಚಂದ್ರ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭ ದೀಪಾವಳಿಯ ಪ್ರಯುಕ್ತ ದ್ವಾರಕಾ ಸಂಸ್ಥೆಯಿಂದ ಸೈಟ್ ಹಾಗೂ ಮನೆ ಖರೀದಿಸಿದವರಿಗೆ ಚಿನ್ನದ ನಾಣ್ಯ, ಬೆಳ್ಳಿಯ ನಾಣ್ಯವನ್ನು ನೀಡಲಾಯಿತು. ದ್ವಾರಕಾ ಕಮರ್ಷಿಯಲ್ಸ್ ಕಟ್ಟಡ ಕಾಮಗಾರಿಯಲ್ಲಿ ಸಹಕರಿಸಿದ ಕಾರ್ಯಕರ್ತರಿಗೆ ಕಿಟ್ ನೀಡಿ ಅಭಿನಂದಿಸಲಾಯಿತು. ಸಭಾ ಕಾರ್ಯಕ್ರಮದ ಬಳಿದ ಶ್ರೀ ಕೆ. ಆರ್. ಗೋಪಾಲಕೃಷ್ಣ ಇವರ ನೇತೃತ್ವದಲ್ಲಿ ‘ಸಂಗೀತ ಸಾಂಗತ್ಯ’ ಕಾರ್ಯಕ್ರಮ ಸಂಪನ್ನಗೊಂಡಿತು.