ಪಟ್ಟೆ ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ವಾಲಿಬಾಲ್ ತಂಡಕ್ಕೆ ಒಂದು ವಾರಗಳ ಕಾಲ ತರಬೇತಿ ಶಿಬಿರ

September 7, 2026
training camp for the volleyball team

ಪಟ್ಟೆ ಬಡಗನ್ನೂರು:3A ಸೈಡ್ ವಾಲಿಬಾಲ್ ಅಸೋಸಿಯೇಷನ್ ಆಫ್ ಕರ್ನಾಟಕ ಹಾಗೂ ಶ್ರೀಕೃಷ್ಣ ವಿದ್ಯಾಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಒಂದು ವಾರಗಳ ತರಬೇತಿ ಶಿಬಿರವು ಪಟ್ಟೆ ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ ಕ್ರೀಡಾಂಗಣದಲ್ಲಿ ಜರಗಿತು. ದಿನಾಂಕ 6 ರಿಂದ 10ರ ತನಕ ಮಹಾರಾಷ್ಟ್ರದ ನಾಸಿಕ್ ಒಳಾಂಗಣ ಕ್ರೀಡಾಂಗಣದಲ್ಲಿ ರಾಷ್ಟ್ರಮಟ್ಟದ 3A ವಾಲಿಬಾಲ್ ಪಂದ್ಯಾಟ ನಡೆಯಲಿರುವುದು.ಈ ತರಬೇತಿಯಲ್ಲಿ ಬೆಂಗಳೂರು, ಮೈಸೂರು, ಉಡುಪಿ, ಕಾರ್ಕಳ, ಮಂಡ್ಯ, ಹಾಸನ ಮತ್ತು ದಕ್ಷಿಣ ಜಿಲ್ಲೆಯ ಆಯ್ಕೆ ಆಟಗಾರರು ಈ ತರಬೇತಿ ಪಂದ್ಯಾಟದಲ್ಲಿ ಭಾಗವಹಿಸುತ್ತಾರೆ.ಈ ಪಂದ್ಯಾಟದಲ್ಲಿ ಭಾಗವಹಿಸಲು ತೆರಳುತ್ತಿರುವ ರಾಜ್ಯ ತಂಡಕ್ಕೆ ತರಬೇತಿದಾರರಾಗಿ ಶ್ರೀ ಕೃಷ್ಣ ವಿದ್ಯಾ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಯುತ ಮೋನಪ್ಪ ಎಮ್, ಶ್ರೀಯುತ ಗೋಪಿನಾಥ್, ಅಮಮ್ಸ್ ಮೂಡಡ್ಕದ ದೈಹಿಕ ಶಿಕ್ಷಣ ಶಿಕ್ಷಕರಾದ ರಫೀಕ್ ಆತೂರು ತರಬೇತಿಯನ್ನು ನೀಡಿರುತ್ತಾರೆ. ಈ ತರ ಬೇತಿಯು ಪಟ್ಟೆ ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಶ್ರೀಯುತ ಗೋಪಾಲಕೃಷ್ಣ ಭಟ್ ಇವರ ನೇತೃತ್ವದಲ್ಲಿ ನಡೆಯಿತು. ಈ ತರಬೇತಿಗೆ ಪ್ರೋತ್ಸಾಹಿಸಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.

Dwaraka Ad

Related Blog

guru prsshasti award fetured image
ಪಟ್ಟೆ ಶ್ರೀಕೃಷ್ಣ ವಿದ್ಯಾ ಸಂಸ್ಥೆಯಲ್ಲಿ ಶ್ರೀಕೃಷ್ಣ ಲೀಲೆ 2026 ಮತ್ತು ಸಾಂದೀಪನಿ ಗುರುಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮ
training camp for the volleyball team
ಪಟ್ಟೆ ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ವಾಲಿಬಾಲ್ ತಂಡಕ್ಕೆ ಒಂದು ವಾರಗಳ ಕಾಲ ತರಬೇತಿ ಶಿಬಿರ
Sri Krishna Educational Institutions Students Selected for the Taluk-Level Volleyball Tournament from the Zonal Level
ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ವಾಲಿಬಾಲ್ ಪಂದ್ಯಾಟದಲ್ಲಿ ವಲಯ ಮಟ್ಟದಿಂದ ತಾಲೂಕು ಮಟ್ಟಕ್ಕೆ ಆಯ್ಕೆ.