ಪಟ್ಟೆ ಶ್ರೀಕೃಷ್ಣ ವಿದ್ಯಾ ಸಂಸ್ಥೆಯಲ್ಲಿ ಶ್ರೀಕೃಷ್ಣ ಲೀಲೆ 2026 ಮತ್ತು ಸಾಂದೀಪನಿ ಗುರುಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮ

September 7, 2026
guru prsshasti award fetured image

ಬಡಗನ್ನೂರುಃ ಶಾಲೆಯಲ್ಲಿ ಗುರುಗಳು ಹೇಳಿಕೊಡುವ ಪಾಠಗಳು ಸಂಸ್ಕೃತಿ ಮತ್ತು ಸಂಸ್ಕಾರ ಒಂದು ಭಾಗ ಎಂದು ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಾಕಾರಿ ಸಂಘದ ಅಧ್ಯಕ್ಷ ನನ್ಯ ಅಚ್ಯುತ ಮೂಡಿತ್ತಾಯ ಹೇಳಿದರು
ಆವರು ಪಟ್ಟೆ ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳು ಹಾಗೂ ಎಸ್.ಕೆ. ಫ್ರೆಂಡ್ಸ್, ಮುಡಿಪಿನಡ್ಕ ಶ್ರೀಕೃಷ್ಣ ಯುವಕಮಂಡಲ, ಪಟ್ಟೆ ಶ್ರೀಕೃಷ್ಣ ಹಿರಿಯ ವಿದ್ಯಾರ್ಥಿ ಸಂಘ, ಪಟ್ಟೆ ಶ್ರೀಕೃಷ್ಣ ಭಜನಾ ಮಂಡಳಿ, ಮುಡಿಪಿನಡ್ಕ ಅಯ್ಯಪ್ಪ ಭಜನಾ ಮಂಡಳಿ, ಪೆರಿಗೇರಿ ನವಚೈತನ್ಯ ಯುವಕಮಂಡಲ, ಪೆರಿಗೇರಿ ಇವುಗಳ ಸಹಯೋಗದೊಂದಿಗೆ
ಶ್ರೀಕೃಷ್ಣ ಲೀಲೆ 2026 ಮತ್ತು ಸಾಂದೀಪನಿ ಗುರುಪ್ರಶಸ್ತಿ ಪ್ರದಾನ ಸಮಾರಂಭ ಮುಖ್ಯ ಅತಿಯಾಗಿ ಮಾತನಾಡಿದರು.
ಸಾಂದೀಪನಿ ಗುರು ಪ್ರಶಸ್ತಿ ಇತಿಹಾಸ ಹೌದು ಪೌರಾಣಿಕ ದೌದು ಶ್ರೀ ಕೃಷ್ಣ ದೇವರು ತಿಳಿದುಕೊಂಡವರು ನಾವು ಹಿಂದೂಗಳಲ್ಲಿ 64 ವಿದ್ಯೆ ಶ್ರೀ ಕೃಷ್ಣನಿಗೆ ತಿಳಿದ್ದಿದರೂ ಗುರುವಿನ ಮೂಲಕ ಪಡೆದುಕೊಳ್ಳಭೇಕು ಎಂಬ ಉಜ್ಜಿನಿಯದಲ್ಲಿ ಕೃಷ್ಣ ಮತ್ತು ಬಲರಾಮರು ನೆಲದಲ್ಲಿ ಕುಳಿತು ವಿದ್ಯೆ ಕಳಿತು ವಿದ್ಯೆಕಳಿತು ದ್ವಾರಕದಲ್ಲಿ ಸಾಮ್ರಾಜ್ಯ ಸ್ಥಾಪನೆ ಮಾಡಿ ಬಳಿಕ ಗುರುಗಳ ಋಣ ತೀರಿಸುವ ನಿಟ್ಟಿನಲ್ಲಿ ಪ್ರಭಾತದಲ್ಲಿ ಸಮುದ್ರದಲ್ಲಿ ಇಳಿದು ಪಾಂಚಜನ್ಯ ಎಂಬ ರಾಕ್ಷಸನನ್ನು ಸಂಹಾರಿಸಿ ಗುರುಗಳ ಪುತ್ರನ್ನನ್ನು ಗುರುವಿನ ತಂದು ಒಪ್ಪಿಸುವ ಮೂಲಕ ಗುರು ಋಣ ತೀರಿಸಿರುವ ಬಗ್ಗೆ ಕಥೆಗಳಲ್ಲಿ ಓದಿದ್ದೇವೆ ಅದೇ ರೀತಿ ಗೋಪಾಲಕೃಷ್ಣ ಭಟ್ ದ್ವಾರಕ ಸಂಸ್ಥೆಯೊಂದಿಗೆ ಶ್ರೀ ಕೃಷ್ಣ ವಿದ್ಯಾ ಸಂಸ್ಥೆಯನ್ನು ಮುನ್ನುಡಿಸುವ ಜೊತೆಗೆ ಸಾಂದೀಪನಿ ಗುರು ಪ್ರಶಸ್ತಿ ನೀಡುವ ಮೂಲಕ ಗುರುಗಳ ಋಣವನ್ನು ತಿರೀಸುವ ಕೆಲಸ ಮಾಡಿದ್ದಾರೆ.

ಗುರುವಿನ ಮೂಲಕ ವಿದ್ಯೆಪಡೆದಾಗ ನೖೆತಿಕ ಮೌಲ್ಯ ದೊರೆಯುತ್ತದೆ ಶಾಲೆಯಲ್ಲಿ ಗುರುಗಳು ಹೇಳಿಕೊಡುವ ಪಾಠಗಳು ಸಂಸ್ಕೃತಿ ಮತ್ತು ಸಂಸ್ಕಾರ ಒಂದು ಭಾಗವಾಗಿದೆ ಆದುದರಿಂದ ಗುರುವಿಗೆ ಶ್ರೇಷ್ಠ ಸ್ಥಾನಮಾನ ವಿದೆ.
ಗುರುಗಳು ಕೇವಲ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುವವರಲ್ಲ ಅವರು ರಾಷ್ಟ್ರ ನಿರ್ಮಾಣ ಶಿಲ್ಪಿಗಳು ಆದರಿಂದ ಗುರುಗಳಿಗೆ ಋಣ ತೀರಿಸುವ ಕೆಲಸ ಮಾಡಿದ್ದಾರೆ ಅದೇ ರೀತಿ ಗೋಪಾಲಕೃಷ್ಣ ಭಟ್ ಮತ್ತು ತಂಡ ಸಮಾಜಮುಖಿ ಕೆಲಸ ಮಾಡುವ ಮೂಲಕ ಸಮಾಜದಿಂದ ಗಳಿಸಿದ ಒಂದಾಷ್ಟನ್ನು ಸಮಾಜಕ್ಕೆ ನೀಡುವ ಜತೆಗೆ ತಮ್ಮಂತೆ ಇತರರು ಬದಕಬೇಕು ಬಾವನೆಯಲ್ಲಿ ಇಟ್ಟು ಕೊಂಡಿದ್ದಾರೆ.

ಗುರು ಪ್ರಶಸ್ತಿ ಭಾಜನರಾದ 95 ವರ್ಷ ವರೋ ವೃದ್ಧರು ಜ್ಞಾನ ವೃದ್ಧರೂ ಆಗಿರುವ ಡಾ. ಡಿ ಸದಾಶಿವ ಪಳ್ಳು ರವರು 3 ರೀತಿಯಲ್ಲಿ ಪಿ ಹೆಚ್ ಡಿ ಪಡೆದುಕೊಂಡು ಬೇರೆ ಬೇರೆ ವಿಚಾರದಲ್ಲಿ ಪಾಂಡಿತ್ಯವನ್ನು ಸಮಾಜಕ್ಕೆ ಅರ್ಪಣೆ ಮಾಡಿರುವ ಡಾ. ಸದಾಶಿವ ಭಟ್ ಪಳ್ಳು ರವರಿಗೆ ಸಾಂದೀಪನಿ ಗುರು ಪ್ರಶಸ್ತಿ ನೀಡಿ ಗೌರವಿಸಿರುವುದು ಅತ್ಯಂತ ಖುಷಿ ತಂದಿದೆ. ಇಂದು ವಿವಿಧ ಸಂಘ ಸಂಸ್ಥೆಗಳ ಪಾಳ್ಗೊಳುವಿಕೆಯಿಂದ ನಡೆದ ಕಾರ್ಯಕ್ರಮ ಊರಿನ ಹಬ್ಬವಾಗಿ ರೂಪುಗೊಂಡಿರುವ ಬಗ್ಗೆ ಪ್ರಶಂಸೆ ವ್ರಕ್ತಪಡಿಸಿ ಶುಭ ಹಾರೖೆಸಿದರು.

ಸಾಂದೀಪನಿ ಗುರುಪ್ರಶಸ್ತಿ ತೂಕ ಬಂದಿದೆ- ಗೋಪಾಲಕೃಷ್ಣ ಭಟ್
ವಿದ್ಯಾಸಂಸ್ಥೆಯ ಅಧ್ಯಕ್ಷ ಗೋಪಾಲಕೃಷ್ಣ ಭಟ್ ರವರು ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ. ಸಾಂದೀಪನಿ ಪ್ರಶಸ್ತಿ ಪ್ರಧಾನ ನೆರವೇರಿಸಿ ಮಾತನಾಡಿ, ದ್ವಾರಕ ಪ್ರತಿಷ್ಠಾನದಿಂದ ಕೊಡಪಡುವ ಪ್ರಶಸ್ತಿ ಸಾಂದೀಪನಿ ನಮ್ಮ ಮಾತೃಸಂಸ್ಥೆ ದ್ವಾರಕ ನಾವು ನಡೆಸುವ ಸಂಸ್ಥೆ ಶ್ರೀಕೃಷ್ಣ ವಿದ್ಯಾಸಂಸ್ಥೆ ಈ ಎಲ್ಲಾವು ಒಂದಕೊಂದು ಅವಿನಾಭ ಸಂಬಂಧ ಹೊಂದಿದೆ. ಇಂದು ಸಂಸ್ಥೆಯಿಂದ ಕೊಡಪಡುವ ಪ್ರಶಸ್ತಿಗೆ ತೂಕ ಬಂದಿದೆ. ಪ್ರಶಸ್ತಿ ಗೆ ಅರ್ಹವ್ಯಕ್ತಿ ಆಗಭೇಕು.ಇಂದು ಪ್ರಶಸ್ತಿಗೂ ಗೌರವ ತರುವ ವ್ಯಕ್ತಿಯಾಗಿ ವಯೋವೃದ್ಧರು ಜ್ಞಾನ ವೃದ್ಧರಾಗಿರುವ ನಿಡಳ್ಳಿ ನಿವೃತ್ತ ಶಿಕ್ಷಕ ಡಾ. ಡಿ. ಸದಾಶಿವ ಭಟ್ಟ, ಪಳ್ಳು, ರವರಿಗೆ ನೀಡುತ್ತಿರುವುದು ಸಂತೋಷ ತಂದಿದೆ ಎಂದು ಪ್ರಶಂಸನೀಯ ಮಾತನ್ನು ವ್ಯಕ್ತಪಡಿಸಿದ ಅವರು ಯಾವುದೇ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳು ಕೖೆಜ್ಯೋಡಿಸಿದಾಗ ಕಾರ್ಯಕ್ರಮ ಯಶಸ್ಸಿಯಾಗುತ್ತದೆ ಎಂಬುದಕ್ಕೆ ಇಂದಿನ ಈ ಸಾಕ್ಷಿಯಾಗಿದೆ. ಸಂಸ್ಥೆಯ ಅಧ್ಯಕ್ಷರ ನಲೆಯಲ್ಲಿ ಮುಂದೆಯೂ ಯಾವುದೇ ಕಾರ್ಯಕ್ರಮ ಅಯೋಜಿಸಿದಾಗ ತಮ್ಮೊಂದಿಗೆ ಕೖೆಜೋಡಿಸುತ್ತಿರಿ ಎಂಬ ಆಶಾಭಾವನೆ ವ್ಯಕ್ತಪಡಿಸಿ ತಮ್ಮೆಲ್ಲರಿಗೂ ಶುಭ ಹಾರೖೆಸಿದರು.

ಪಟ್ಟೆ ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಜಿ ಪರಮೇಶ್ವರ ಭಟ್ ಮಾತನಾಡಿ ಶಿಕ್ಷಕ ವೃತ್ತಿ ಶ್ರೇಷ್ಠ ಜೊತೆಗೆ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಶಿಕ್ಷಕರು ಮಕ್ಕಳು ತಿದ್ದಿ ತಿಡಿ ಸಮಾಜದ ಮುಖ್ಯ ವಾಹಿನಿಗೆ ತರುತ್ತಾರೆ ಎಂದು ಹೇಳಿದರು.

ಸಾಂದೀಪನಿ ಗುರು ಪ್ರಶಸ್ತಿ ಪ್ರಧಾನ
ನಿಡಳ್ಳಿ ನಿವೃತ್ತ ಶಿಕ್ಷಕ ಡಾ. ಡಿ. ಸದಾಶಿವ ಭಟ್ಟ, ಪಳ್ಳು ರವರಿಗೆ ಪೇಟ ಧರಿಸಿ ಶಾಲು ಹೊದಿಸಿ ಹಾರ ಹಾಕಿ ಫಲಪುಷ್ಪ ಸ್ಮರಣಿಕೆ, ಹಾಗೂ ಸಾಂದೀಪನಿ ಗುರು ಪ್ರಶಸ್ತಿ ಪತ್ರ ನೀಡಿ ಸಂಸ್ಥೆಯ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಹಾಗೂ ಗಣ್ಯರು ಸೇರಿ ಅಭಿನಂದಿಸಿದರು.

ದಕ್ಷ ಪ್ರಾಮಾಣಿಕತೆ ಕಾರ್ಯಕರ್ತರಿಂದ ಯಾವುದೇ ಸಂಸ್ಥೆ ಯತೋಅತಿಶಯುಕ್ತವಾಗಿ ಬೆಳೆಯಲು ಸಾಧ್ಯ _ ಡಾ. ಸದಾಶಿವ ಭಟ್ ಪಳ್ಳು

ಸಾಂದೀಪನಿ ಗುರು ಪ್ರಶಸ್ತಿ ಸ್ವೀಕರಿಸಿ ನಿಡಳ್ಳಿ ನಿವೃತ್ತ ಶಿಕ್ಷಕ ಡಾ. ಡಿ. ಸದಾಶಿವ ಭಟ್ಟ, ಪಳ್ಳು ರವರು ಮಾತನಾಡಿ ನನಗೆ ದ್ವಾರಕ ಪ್ರತಿಷ್ಠಾನದವರು ಸಾಂದೀಪನಿ ಗುರು ಪ್ರಶಸ್ತಿ ನೀಡಿ ಗೌರವಿಸಿದ್ದು ಸಂತೋಷ ತಂದಿದೆ ದ್ವಾರಕ ಗೋಕುಲ ಅಂದರೆ ಬಹಳಷ್ಟು ಇಷ್ಟ

ಒಬ್ಬ ಮನುಷ್ಯನಿಗೆ ಮೂಲಭೂತ ಅವಶ್ಯಕತೆ ಮೂರು ಎಂದು ಹೇಳುತ್ತಾರೆ ಆಸನ ವಸನ ವಸತಿ ಅದು ಸಾಕಗದೆ ಶಿಕ್ಷಣ, ಆರೋಗ್ಯ ಮನೋರಂಜನೆ ಆರು ವಿಷಯವನ್ನು ಗಮನದಲ್ಲಿಟ್ಟುಕೊಂಡು ದ್ವಾರಕ ಪ್ರತಿಷ್ಠಾನದವರು ಕೆಲಸ ಮಾಡುವುದು ಸಂತೋಷ ತಂದಿದೆ ಇಲ್ಲದಿದ್ದರೆ ಸಂಸ್ಥೆ ಯಾವುದೇ ಕಾರ್ಯ ಇವತ್ತು ಮಾಡಲು ಸಾಧ್ಯವಿಲ್ಲ ಅದರೊಂದಿಗೆ ಆಂಗ ಸಂಸ್ಥೆಗಳು ಬೇಕು ಬೇಕಾದಷ್ಟು ಹಣ ಬೇಕು ಅಷ್ಟು ಸಾಲದು ದಕ್ಕೆ ಮತ್ತು ಪ್ರಾಮಾಣಿಕ ಕಾರ್ಯಕರ್ತರು ಬೇಕು. ದ್ವಾರಕ ಪ್ರತಿಷ್ಠಾನದಲ್ಲಿ ದಕ್ಕೆ ಪ್ರಾಮಾಣಿಕ ಕಾರ್ಯಕರ್ತರಿದ್ದಾರೆ ಇದು ಭಾಗ್ಯ. ದ್ವಾರಕ ಪ್ರತಿಷ್ಠಾನದ ಅಧ್ಯಕ್ಷರು ಕಾರ್ಯದರ್ಶಿಗಳು ದಕ್ಷರು

ಸಂಸ್ಥೆ ಯತೋಅತಿಶಯುಕ್ತವಾಗಿ ಬೆಳೆಯುವಲಿ ಸಂಶಯವಿಲ್ಲ ಎಂದ ಅವರು.ನಾನು ಶ್ರೀಕೃಷ್ಣ ನ ಬಗ್ಗೆ 2 ಮಹಾಕಾವ್ಯ ಬರೆದಿದ್ದೇನೆ ಒಂದು ಯಕ್ಷಗಾನದಲ್ಲಿ ಶ್ರೀ ಕೃಷ್ಣ ಚರಿತೆ ಇದರಲ್ಲಿ ಇಡೀ 5 ಸಾವಿರ ಪದ್ಮ ವಿದ್ದು 5000 ಪುಟ ಇದೆ. ಗರಡಿ ಶ್ರೀ ಕೃಷ್ಣ ಚರತೆ 450 ಪುಟ ಇದೆ

ಆದರಿಂದ ಕೃಷ್ಣ, ಬಗ್ಗೆ ಎರಡು ಮಹಾಕಾವ್ಯ ಬರೆದಿದ್ದೇನೆ ಆಗಾಗಿ ಕೃಷ್ಣ ಗೋಕುಲ ಎಂದಾಗ ಬಹಳ ಸಂತೋಷವಾಯಿತು. ಮಹಾಕಾವ್ಯ ಯಾರು ಬರೆಯಲಿಲ್ಲ ಮತ್ತು 10 ಭಾಷೆಯಲ್ಲಿ ಯಕ್ಷಗಾನ ಬರೆದಿದ್ದೇನೆ ಇದು ಇಷ್ಟರವರೆಗೆ ಯಾರು ಬರೆಯಿಲ್ಲ ಎರಡು ಗರಡಿಯಲ್ಲಿ ಮತ್ತು ಎರಡು ಯಕ್ಷಗಾನದಲ್ಲಿ ನಾಲ್ಕು ಮಹಾಕಾವ್ಯ ಬರೆದಿದ್ದೇನೆ ಎಂದು ಹೇಳಿ ನನಗೆ ಸಾಂದೀಪನಿ ಪ್ರಶಸ್ತಿ ನೀಡಿ ಗೌರವಿಸಿದ ಸಂಸ್ಥೆಯ ಅಧ್ಯಕ್ಷ ಮತ್ತು ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.

ಕಾರ್ಯಕ್ರಮವು ಪಟ್ಟೆ. ಶ್ರೀಕೃಷ್ಣ ವಿದ್ಯಾಸಂಸ್ಥೆಗಳ ಆವರಣದಲ್ಲಿ ಸೆ. 5 ರಂದು ನಡೆಯಿತು .

ವೇದಿಕೆಯಲ್ಲಿ ಪಟ್ಟೆ ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ ಉಪಾಧ್ಯಕ್ಷ ಅಮೃತ ಕೃಷ್ಣ, ಆಡಳಿತ ಮಂಡಳಿ ನಿರ್ದೇಶಕಿ ಅಶ್ವಿನಿ ಗೋಪಾಲಕೃಷ್ಣ ಭಟ್, ಪ್ರತಿಭಾ ಪ್ರೌಢ ಶಾಲಾ ಮುಖ್ಯ ಗುರು ಸುಮನಾ ಬಿ., ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಗುರು ರಾಜಗೋಪಾಲ ಎನ್, ಶ್ರೀಕೃಷ್ಣ ಆಂಗ್ಲಮಾಧ್ಯಮ ಶಾಲಾ ಮುಖ್ಯ ಗುರು ಪುಷ್ಪಾವತಿ ಡಿ. ಉಪಸ್ಥಿತರಿದ್ದರು .

ವಿದ್ಯಾ ಸಂಸ್ಥೆಗಳ ಉಪಾಧ್ಯಕ್ಷ ಅಮೃತ ಕೃಷ್ಣ ಅತಿಥಿಗಳನ್ನು ಶಾಲು ಹಾಕಿ ಗೌರವಿಸಿದರು.
ಆಡಳಿತ ಮಂಡಳಿ ನಿರ್ದೇಶಕಿ ಅಶ್ವಿನಿ ಗೋಪಾಲಕೃಷ್ಣ ಭಟ್ ಅತಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರುಗಳು, ಮಕ್ಕಳ ಪೋಷಕರು, ವಿವಿಧ ಸಂಘಸಂಸ್ಥೆಗ ಅಧ್ಯಕ್ಷರುಗಳು ಪದಾಧಿಕಾರಿಗಳು ಶಿಕ್ಷಣಾಭಿಮಾನಿಗಳು, ಹಿರಿಯ ವಿದ್ಯಾರ್ಥಿಗಳು ಊರಪರವೂರ ಭಕ್ಕಾಧಿಗಳು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದರು.

ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು.
ಪ್ರತಿಭಾ ಪ್ರೌಢ ಶಾಲಾ ಮುಖ್ಯ ಗುರು ಸುಮನ ಬಿ ಸ್ವಾಗತಿಸಿದರು.
ಪ್ರಾಥಮಿಕ ಶಾಲಾ ಮುಖ್ಯ ಗುರು ರಾಜಗೋಪಾಲ ಎನ್, ಅಭಿನಂದನಾ ಭಾಷಮಾಡಿದರು.
ಶ್ರೀಕೃಷ್ಣ ಆಂಗ್ಲಮಾಧ್ಯಮ ಶಾಲಾ ಮುಖ್ಯ ಗುರು ಪುಷ್ಪಾವತಿ ಡಿ. ವಂದಿಸಿದರು
ಪ್ರೌಢಶಾಲಾ ಸಹ ಶಿಕ್ಷಕ ವಿಶ್ವನಾಥ್ ಗೌಡ ಬೊಳ್ಳಾಡಿ, ಹಾಗೂ ಶಿಕ್ಷಕಿ ಚಿತ್ರ ಕಾರ್ಯಕ್ರಮ ನಿರೂಪಿಸಿದರು.

“ಶ್ರೀಕೃಷ್ಣ ಸ್ತುತಿ” (ಭಜನಾ ಕಾರ್ಯಕ್ರಮ):

ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕರಾದ ಅಚ್ಯುತ ಭಟ್, ಪಾದೆಕರ್ಯ ಚಾಲನೆ ನೀಡಿ ಶುಭ ಹಾರೖೆಸಿದರು
ಭಜನಾ ಕಾರ್ಯಕ್ರಮದಲ್ಲಿ ಸರ್ವಶಕ್ತಿ ಮಹಿಳಾ ಭಜನಾ ಮಂಡಳಿ, ಪಡುಮಲೆ, ಆದಿಶಕ್ತಿ ಮಹಿಳಾ ಭಜನಾ ಮಂಡಳಿ, ಪಟ್ಟೆ (ಪಡುಮಲೆ), ಅಯ್ಯಪ್ಪ ಮಹಿಳಾ ಭಜನಾ ಮಂಡಳಿ, ಪೆರಿಗೇರಿ, ಶ್ರೀ ವರಮಹಾಲಕ್ಷ್ಮಿ ಮಹಿಳಾ ಭಜನಾ ಮಂಡಳಿ, ಪಡುಮಲೆ, ಶ್ರೀಕೃಷ್ಣ ಮಹಿಳಾ ಭಜನಾ ಮಂಡಳಿ, ಮುಡಿಪಿನಡ್ಕ ಇದರ ಸದಸ್ಯರುಭಾಗವಹಿಸಿದರು.

ಶ್ರೀಕೃಷ್ಣ ವೇಷ ಸ್ಪರ್ಧೆ”
3ರಿಂದ 6 ವಯೋಮಾನದ ಮಕ್ಕಳಿಗೆ ಮುದ್ದು ಕೃಷ್ಣ ಸ್ಪರ್ಧೆ ಹಾಗೂ 6ರಿಂದ 10 ವಯೋಮಾನದ ಮಕ್ಕಳಿಗೆ ಬಾಲಕೃಷ್ಣ / ರಾಧಾಕೃಷ್ಣ ಸ್ಪರ್ಧೆ ನಡೆದು ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು

“ಮೊಸರು ಕುಡಿಕೆ ಸ್ಪರ್ಧೆ
5ನೇ ತರಗತಿಯಿಂದ 7ನೇ ತರಗತಿ ವರೆಗೆ ಮತ್ತು 8ನೇ ತರಗತಿಯಿಂದ 10ನೇ ತರಗತಿ ವರೆಗೆ ವಿದ್ಯಾರ್ಥಿಗಳಿಗೆ ಮೊಸರು ಕುಡಿಕೆ ಸ್ಪರ್ಧೆ ನಡೆಯಿತು

ಸಾರ್ವಜನಿಕರಿಗೆ:
ಪುರುಷರಿಗೆ ವಾಲಿಬಾಲ್ ಪಂದ್ಯಾಟವನ್ನು ಕುಂಬ್ರ ಖ್ಯಾತ ಉದ್ಯಮಿ ರತನ್ ರೈ ಕುಂಬ್ರ, ಚಾಲನೆ ನೀಡಿ ಶುಭ ಹಾರೖೆಸಿದರು.
ಮಾತೆಯರಿಗೆ ಹಗ್ಗಜಗ್ಗಾಟ ಪಂದ್ಯಾಟವನ್ನು ಪಡುಮಲೆ ಸ. ಹಿ. ಪ್ರಾ ಶಾಲಾ ನಿವೃತ್ತ ಮುಖ್ಯ ಗುರುಗಳಾದ ನಾರಾಯಣ ಪಾಟಾಳಿ ಪಟ್ಟೆ ಚಾಲನೆ ನೀಡಿದರು

” ಮೆರವಣಿಗೆ ಚಾಲನೆ:
ಪ್ರಗತಿಪರ ಕೃಷಿಕರಾದ ಶಂಕರನಾರಾಯಣ ಪ್ರಸಾದ್, ಪಟ್ಟಾಜೆ ಹಾಗೂ ಸಂಸ್ಥೆಯ ಅಧ್ಯಕ್ಷರಾದ ಗೋಪಾಲಕೃಷ್ಣ ಭಟ್ ಶ್ರೀಕೃಷ್ಣ ರಥ” ಮೆರವಣಿಗೆಯನ್ನು ಶ್ರೀ ಕೃಷ್ಣನ ವಿಗ್ರಹಕ್ಕೆ ತುಳಸಿ ಹಾರ ಹಾಕಿ, ಆರತಿ ಬೆಳಗಿ, ತೆಂಗಿನ ಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.

ಅದ್ದೂರಿಯಾಗಿ ವಿಜೃಂಭಣೆ ಮೆರವಣಿಗೆ :
ಶಾಲಾ ಆವರಣದಿಂದ ಅಟ್ಟಿ ಮಡಿಕೆ, ಕುಣಿತ ಭಜನೆ, ಬೊಂಬೆ ಕುಣಿತ, ಹುಲಿ, ಕರಡಿ ವೇಷ, ಬ್ಯಾಡ್ ವಾದ್ಯ ಘೋಷ ಸಿಡಿಮದ್ದು ಪ್ರದರ್ಶನ ಪುಟಾಣಿ ಮಕ್ಕಳ ಕೃಷ್ಣ ವೇಷಧಾರಿಗಳಾಗಿ ಮುಡಿಪಿನಡ್ಕ ಶ್ರೀಕೃಷ್ಣ ಭಜನಾ ಮಂದಿರಕ್ಕೆ ಸಾಗಿ ಬಂದು ಶ್ರೀ ಕೃಷ್ಣನಿಗೆ ವಿಶೇಷ ಪೂಜೆ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.

ಸಾರ್ವಜನಿಕ ಅನ್ನ ಪ್ರಸಾದ ವಿತರಣೆ :
ಕಾರ್ಯಕ್ರಮದಲ್ಲಿ. ಸಾವಿರಕ್ಕೂ ವಿಕ್ಕಿ ಭಕ್ಕಾದಿಗಳು ಭಾಗವಹಿಸಿ ಅನ್ನಪ್ರಸಾದ ಸ್ವೀಕರಿಸಿದರು.

Dwaraka Ad

Related Blog

guru prsshasti award fetured image
ಪಟ್ಟೆ ಶ್ರೀಕೃಷ್ಣ ವಿದ್ಯಾ ಸಂಸ್ಥೆಯಲ್ಲಿ ಶ್ರೀಕೃಷ್ಣ ಲೀಲೆ 2026 ಮತ್ತು ಸಾಂದೀಪನಿ ಗುರುಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮ
training camp for the volleyball team
ಪಟ್ಟೆ ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ವಾಲಿಬಾಲ್ ತಂಡಕ್ಕೆ ಒಂದು ವಾರಗಳ ಕಾಲ ತರಬೇತಿ ಶಿಬಿರ
Sri Krishna Educational Institutions Students Selected for the Taluk-Level Volleyball Tournament from the Zonal Level
ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ವಾಲಿಬಾಲ್ ಪಂದ್ಯಾಟದಲ್ಲಿ ವಲಯ ಮಟ್ಟದಿಂದ ತಾಲೂಕು ಮಟ್ಟಕ್ಕೆ ಆಯ್ಕೆ.