ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳು ಪಟ್ಟೆಯಲ್ಲಿ ರಾಮಾಯಣ ಪರೀಕ್ಷೆ

August 31, 2025
Ramayana Examination at Sri Krishna Educational Institutions, Puttur

ಪಟ್ಟೆ ಬಡಗನ್ನೂರು: ಇಲ್ಲಿನ ದ್ವಾರಕಾ ಪ್ರತಿಷ್ಠಾನ(ರಿ) ಪುತ್ತೂರು ಇದರ ವತಿಯಿಂದ ನಡೆಸಲ್ಪಡುವ ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳಲ್ಲಿ 2025-26ನೇ ಸಾಲಿನ ರಾಮಾಯಣ ಪರೀಕ್ಷೆಯು ದಿನಾಂಕ 31/08/2025 ರ ಆದಿತ್ಯವಾರದಂದು ನಡೆಯಿತು. ಕೌಡಿಚ್ಚಾರು, ಪಟ್ಟೆ, ಬೆಟ್ಟಂಪಾಡಿ, ಸುಳ್ಯಪದವು ಹಾಗೂ ಈಶ್ವರಮಂಗಲ ಪರಿಸರದ ಸುಮಾರು ಹತ್ತಕ್ಕೂ ಹೆಚ್ಚು ಶಾಲೆಗಳ ಸುಮಾರು 53 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು. 5 ರಿಂದ 8ನೇತರಗತಿಯ ವಿದ್ಯಾರ್ಥಿಗಳಿಗೆ ರಾಮಾಯಣದ ಕುರಿತ ಆಸಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ದ್ವಾರಕಾ ಪ್ರತಿಷ್ಠಾನವು ಈ ಪರೀಕ್ಷೆಯನ್ನು ವಿಶೇಷವಾಗಿ ಆಯೋಜಿಸಿದೆ.

ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳ ಶಿಕ್ಷಕರು ಈ ಪರೀಕ್ಷೆಯಲ್ಲಿ ಸಹಕರಿಸಿದರು. ಸಂಸ್ಥೆಗಳ ಸಂಚಾಲಕರಾದ ಶ್ರೀ ವಿಘ್ನೇಶ್ ಹಿರಣ್ಯ, ಶ್ರೀಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಶ್ರೀ ರಾಜಗೋಪಾಲ ಎನ್ ಉಪಸ್ಥಿತರಿದ್ದರು.

Dwaraka Constructions Ad

Related Blog

ಪುತ್ತೂರು ವಲಯದ ಮಟ್ಟದ ಕ್ರೀಡಾಕೂಟದಲ್ಲಿ ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಗೆ ಬಹುಮಾನಗಳು
kanakabhiyana ramadhanya charite gamaka
ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳು ಪಟ್ಟೆ, ಬಡಗನ್ನೂರು ಕನಕಾಭಿಯಾನ -ರಾಮಧಾನ್ಯ ಚರಿತೆ -ಗಮಕ
Shrikrishna educational trust
ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳು ಪಟ್ಟೆ -ವಿನಾಯಕ ಚೌತಿ ಹಬ್ಬದ ಪ್ರಯುಕ್ತ ಯಕ್ಷಗಾನ ತಾಳಮದ್ದಳೆ