ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳು ಪಟ್ಟೆಯಲ್ಲಿ ವಿಶ್ವ ಯೋಗ ದಿನಾಚರಣೆ

June 21, 2025

ಪಟ್ಟೆ ಬಡಗನ್ನೂರು :- ದಿನಾಂಕ 21-06-2025 ರಂದು ಇಲ್ಲಿನ ಶ್ರೀ ಕೃಷ್ಣ ವಿದ್ಯಾಸಂಸ್ಥೆಯ ಶಾಲಾ ಸಭಾಂಗಣದಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ದೀಪ ಪ್ರಜ್ವಲನೆ ಮಾಡುವ ಮೂಲಕ ಸಂಸ್ಥೆಯ ಸಂಚಾಲಕರಾದ ಶ್ರೀಮಾನ್ ವಿಘ್ನೇಶ್ ಹಿರಣ್ಯ ಅವರು ಚಾಲನೆ ನೀಡುವುದರೊಂದಿಗೆ ದೇಹ ಮತ್ತು ಮಾನಸಿಕ ಸದೃಢತೆಯನ್ನು ಕಾಪಾಡುವ ಅತ್ಯುತ್ತಮ ಅಭ್ಯಾಸ ಯೋಗ ಎಂದು ತಿಳಿಸಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಪ್ರಾಥಮಿಕ ಶಾಲಾ ಮುಖ್ಯ ಗುರುಗಳಾದ ಶ್ರೀಮಾನ್ ರಾಜಗೋಪಾಲ ಎನ್ ರವರು ಮನಸ್ಸಿನ ಏಕಾಗ್ರತೆ,ದೇಹದ ಆರೋಗ್ಯಕ್ಕೆ ಯೋಗ ಸಂಜೀವಿನಿ ಎಂದು ತಿಳಿಸಿದರು.

ಪ್ರಾಥಮಿಕ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀಮಾನ್ ಕೇಶವ ಪ್ರಸಾದ್ ನೀಲಗಿರಿ, ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀಮಾನ್ ಸತೀಶ್ ಕೊಪ್ಪಳ ಇವರು ಉಪಸ್ಥಿತರಿದ್ದರು. ಪ್ರೌಢಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕಿಯಾದ ಮಾತಾಜಿ ಜ್ಯೋತಿ ಕುಮಾರಿ ಇವರು ಸ್ವಾಗತಿಸಿ ಪ್ರೌಢಶಾಲಾ ಮುಖ್ಯ ಗುರುಗಳಾದ ಮಾತಾಜಿ ಸುಮನಾ ಬಿ ಇವರು ವಂದಿಸಿದರು. ಪ್ರೌಢಶಾಲಾ ವಿಜ್ಞಾನ ಶಿಕ್ಷಕಿಯಾದ ಮಾತಾಜಿ ಭವಿತಾ ಪಿ ಕಾರ್ಯಕ್ರಮವನ್ನು ನಿರೂಪಿಸಿದರು.ನಂತರ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿಯಾದ ಮಾತಾಜಿ ಭಾರತಿ ಮತ್ತು 9ನೇ ತರಗತಿ ವಿದ್ಯಾರ್ಥಿ ಆದಿತ್ಯ ಕೃಷ್ಣ ಇವರಿಂದ ಯೋಗ ಪ್ರಾತ್ಯಕ್ಷಿಕೆಗಳು ನಡೆಯಿತು. ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Dwaraka Constructions Ad

Related Blog

ಪುತ್ತೂರು ವಲಯದ ಮಟ್ಟದ ಕ್ರೀಡಾಕೂಟದಲ್ಲಿ ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಗೆ ಬಹುಮಾನಗಳು
kanakabhiyana ramadhanya charite gamaka
ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳು ಪಟ್ಟೆ, ಬಡಗನ್ನೂರು ಕನಕಾಭಿಯಾನ -ರಾಮಧಾನ್ಯ ಚರಿತೆ -ಗಮಕ
Shrikrishna educational trust
ಶ್ರೀಕೃಷ್ಣ ವಿದ್ಯಾ ಸಂಸ್ಥೆಗಳು ಪಟ್ಟೆ -ವಿನಾಯಕ ಚೌತಿ ಹಬ್ಬದ ಪ್ರಯುಕ್ತ ಯಕ್ಷಗಾನ ತಾಳಮದ್ದಳೆ